ಮಂಡ್ಯ ಬೆಲ್ಲಕ್ಕೆ ಕೆಮಿಕಲ್ಸ್ ಮಿಕ್ಸ್?
ಮಂಡ್ಯ ಜಿಲ್ಲೆ ಅಂದ್ರೆ ರಾಜ್ಯಕ್ಕೆನೆ ಸಿಹಿ ಉಣಿಸುತ್ತಿರುವ ಜಿಲ್ಲೆ ಅಂತಾ ಫೇಮಸ್. ಇಲ್ಲಿನ ಬೆಲ್ಲಕ್ಕೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಫುಲ್ ಡಿಮ್ಯಾಂಡ್ ಇದೆ. ಹೀಗಿರುವಾಗ ಇಲ್ಲಿನ ಬೆಲ್ಲ ಇದೀಗ ತನ್ನ ಮೊದಲಿನ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬೆಲ್ಲ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಸಕ್ಕರೆಯನ್ನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ. ಜಿಲ್ಲೆಯ ವಿವಿಧ ಆಲೆಮನೆಗಳಲ್ಲಿ ಈ ಸಕ್ಕರೆ ಹಾಕಿ ಬೆಲ್ಲ ತಯಾರಿಸುತ್ತಿರುವುದು ಮಾಮೂಲಿಯಾಗಿ, ಬೆಲ್ಲ ತಯಾರಿಸುವ ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published on: Dec 11, 2020 10:32 AM
Latest Videos