Video: ಪತಿಯನ್ನು ನೋಡಲು ಮುಖಮುಚ್ಚಿಕೊಂಡು ಜೈಲಿಗೆ ಬಂದ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಪತ್ನಿ
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಕೋರ್ಟ್ ಬೇಲ್ ಮಂಜೂರು ಮಾಡಿದ್ದರೂ, 1 ಲಕ್ಷ ರೂಪಾಯಿ ಭದ್ರತೆ ಹಣ ಠೇವಣಿ ಆಗದ ಕಾರಣ ಅವರ ಬಿಡುಗಡೆ ತಡವಾಗಿದೆ. ಇದೀಗ ಚಿನ್ನಯ್ಯ ಪತ್ನಿ ಮಲ್ಲಿಕಾ ವಕೀಲರೊಂದಿಗೆ ಜೈಲಿಗೆ ಭೇಟಿ ನೀಡಿದ್ದಾರೆ.
ಶಿವಮೊಗ್ಗ, ಡಿ.18: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಬಿಡುಗಡೆ ಪ್ರಕ್ರಿಯೆ ತಡವಾಗಿದ್ದು, ಇದೀಗ ಅವರ ಪತ್ನಿ ಮಲ್ಲಿಕಾ ಜೈಲಿಗೆ ಭೇಟಿ ನೀಡಿದ್ದಾರೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹಾಗೂ ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚಿನ್ನಯ್ಯ, ಕಳೆದ ಮೂರು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲೇ ಇದ್ದಾರೆ. ನಿನ್ನೆ ಬೆಳಗ್ಗೆಯೇ ನ್ಯಾಯಾಲಯದಲ್ಲಿ ಬೇಲ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅವರ ಮನೆಯವರು 1 ಲಕ್ಷ ರೂಪಾಯಿ ಭದ್ರತಾ ಠೇವಣಿ ಹಣವನ್ನು ಜಮಾ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಯ್ಯ ಅವರ ಬಿಡುಗಡೆಗೆ ವಿಳಂಬವಾಗಿದೆ. ಬೇಲ್ ಸಿಕ್ಕಿದರೂ ಹಣ ಠೇವಣಿ ಆಗದ ಕಾರಣ ಅವರು ಇನ್ನೂ ಜೈಲಿನಲ್ಲಿಯೇ ಉಳಿದುಕೊಂಡಿದ್ದಾರೆ. ಸದ್ಯ ವಕೀಲರೊಂದಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಗಮಿಸಿರುವ ಚಿನ್ನಯ್ಯ ಪತ್ನಿ ಮಲ್ಲಿಕಾ, ತಮ್ಮ ಪತಿಯನ್ನು ಭೇಟಿ ಮಾಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
