ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿದಳು, ಎಲ್ಲರೂ ಅಚ್ಚರಿ!

Edited By:

Updated on: Dec 28, 2023 | 6:19 PM

ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿರುವಂತಹ ಅಚ್ಚರಿಯ ಘಟನೆಯೊಂದು ಚಿತ್ರದುರ್ಗದ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದಿದೆ. ನಿನ್ನೆ ಸಂಜೆ ರಾಯರ ಮಠಕ್ಕೆ ವೀಲ್ ಚೇರ್​ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ. 

ಚಿತ್ರದುರ್ಗ, ಡಿಸೆಂಬರ್ 28: ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿರುವಂತಹ ಅಚ್ಚರಿಯ ಘಟನೆಯೊಂದು ಚಿತ್ರದುರ್ಗದ ರಾಘವೇಂದ್ರಸ್ವಾಮಿ ಮಠ (Raghavendraswamy Math) ದಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕ ಮೂಲದ ಶ್ರೀಕಾಂತ್ ಮತ್ತು ಅರುಣಾ ದಂಪತಿ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ವಿಕಲಚೇತನ ಪುತ್ರಿ ತೇಜಸ್ವಿನಿ, ಪುತ್ರ ಸಾಗರ್​ ಕೂಡ ಜೊತೆಗಿದ್ದರು. ರಕ್ತನಾಳ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ತೇಜಸ್ವಿನಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಳು ಎನ್ನಲಾಗಿದೆ. ನಿನ್ನೆ ಸಂಜೆ ರಾಯರ ಮಠಕ್ಕೆ ವೀಲ್ ಚೇರ್​ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More