ಚಿತ್ರದುರ್ಗ ಬಸ್ ದುರಂತ: ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ

Updated on: Dec 26, 2025 | 11:46 AM

ಚಿತ್ರದುರ್ಗ ಬಸ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ (42) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಗೋರ್ಲತ್ತು ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿತ್ತು. ಆಪರೇಷನ್ ನಂತರವೂ ಬದುಕುಳಿಯುವ ಭರವಸೆ ಕಡಿಮೆಯಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ತಮ್ಮನ್ನು ಆಶ್ರಯಿಸಿದ್ದ ಕುಟುಂಬ ಅನಾಥವಾಗಿದೆ ಎಂದು ಚಾಲಕರ ಪತ್ನಿ ಕಣ್ಣೀರಾಗಿದ್ದಾರೆ.

ಚಿತ್ರದುರ್ಗ, ಡಿ.26: ಗೋರ್ಲತ್ತು ಕ್ರಾಸ್ ಬಳಿ ಇತ್ತೀಚೆಗೆ ನಡೆದ ಭೀಕರ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ (42) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಪರೇಷನ್ ನಂತರ ಅವರ ಜೀವಕ್ಕೆ ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದರು. ರಫೀಕ್ ಅವರ ಪತ್ನಿ ನೀಡಿರುವ ಮಾಹಿತಿ ಪ್ರಕಾರ, ಅಪಘಾತದಲ್ಲಿ ಅವರ ಹೊಟ್ಟೆಯ ಭಾಗಕ್ಕೆ ತೀವ್ರ ಪೆಟ್ಟುಬಿದ್ದಿತ್ತು. ಹೊಟ್ಟೆಯ ಒಳಗಿರುವ ಕೆಲವು ಭಾಗಗಳಿಗೆ ಹಾನಿಯಾಗಿದೆ. ವೈದ್ಯರು ಆಪರೇಷನ್‌ಗೆ ಮುನ್ನವೇ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರೂ, ಇದಕ್ಕೆ ನಾವು ಕೂಡ ಅನುಮತಿ ನೀಡಿದ್ದೇವು, ಆಪರೇಷನ್ ನಂತರ ವಾರ್ಡ್‌ಗೆ ಸ್ಥಳಾಂತರಿಸಿದರು, ಮರುದಿನ ಬೆಳಗ್ಗೆ 6:30 ರ ಸುಮಾರಿಗೆ ವೈದ್ಯರು ರಫೀಕ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಇದೀಗ ಮೊಹಮ್ಮದ್ ರಫೀಕ್ ಅವರ ನಿಧನದಿಂದ ಅವರ ಕುಟುಂಬ ಕಂಗಾಲಾಗಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ