ನೆಲಮಂಗಲ: ತಿರುವಿನಲ್ಲಿ ನಿಯಂತ್ರಣ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು, ತಂದೆ-ಮಗ ಸ್ಥಳದಲ್ಲೇ ಸಾವು
ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದ ಒಂದೇ ಕುಟುಂಬದ ಮೇಲೆ ತೋಟಗೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ರಿಸ್‌ಮಸ್ ಹಬ್ಬದ ನಂತರ ಸಂಜೆ 7:30 ಕ್ಕೆ ಜಮೀನು ನೋಡಿಕೊಂಡು ಕುಟುಂಬ ಸಮೇತವಾಗಿ ವಾಪಸ್ ಆಗುತ್ತಿದ್ದ ವೇಳೆ ತೋಟಗೆರೆ ಟರ್ನಿಂಗ್ ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿಯಾಗಿದ್ದು ಸಾಪ್ಟ್ ವೇರ್ ಇಂಜಿನೀಯರ್ ಹರೀಶ್ (39) ಮತ್ತು ಅವರ ತಂದೆ ವೀರಭದ್ರ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೆಲಮಂಗಲ, ಡಿಸೆಂಬರ್ 26: ಗೌರಿಬಿದನೂರಿನಿಂದ ದಾಸರಹಳ್ಳಿಗೆ ಮರಳುತ್ತಿದ್ದ ಒಂದೇ ಕುಟುಂಬದವರು ತೋಟಗೆರೆ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕ್ರಿಸ್‌ಮಸ್ ಹಬ್ಬದ ನಂತರ ಸಂಜೆ 7:30 ಕ್ಕೆ ಕುಟುಂಬ ಸಮೇತವಾಗಿ ವಾಪಸ್ ಆಗುತ್ತಿದ್ದ ವೇಳೆ ತೋಟಗೆರೆ ಟರ್ನಿಂಗ್ ನಲ್ಲಿ ಕಂಟ್ರೋಲ್ ಸಿಗದೆ ಕಾರು ಮರಕ್ಕೆ ಡಿಕ್ಕಿಯಾಗಿದ್ದು ಸಾಪ್ಟ್ ವೇರ್ ಇಂಜಿನೀಯರ್ ಹರೀಶ್ (39) ಮತ್ತು ಅವರ ತಂದೆ ವೀರಭದ್ರ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಯಿ ಗೌರಮ್ಮ (62), ಹರೀಶ್ ಪತ್ನಿ ಮೈತ್ರಿ (32), ಮಗಳು ಸಿರಿ (10), ಚಿಕ್ಕಮ್ಮನ ಮಗಳು ವಂದನ (8) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತಪಟ್ಟವರನ್ನು ನೆಲಮಂಗಲ ಸರ್ಕಾರಿ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

