ಕೋಡಿ ಬಿದ್ದ ನೀರಿನಲ್ಲಿ ಹೊರಳಾಡಿದ ತಹಸೀಲ್ದಾರ್; ವಿಡಿಯೋ ಇಲ್ಲಿದೆ ನೋಡಿ
ಚಿತ್ರದುರ್ಗದ ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ಕೋಡಿ ಬಿದ್ದ ನೀರಿಗೆ ಇಳಿದು ಹೊರಳಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಚಿತ್ರದುರ್ಗ: ಭಾರೀ ಮಳೆಯಿಂದಾಗಿ ಕರೆಗಳು ಭರ್ತಿಗೊಂಡು ನೀರು ಹೊರಕ್ಕೆ ಬಂದು ಅವಾಂತರಗಳೇ ಸೃಷ್ಟಿಯಾಗುತ್ತಿದೆ. ಜನ ಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ, ಆದರೆ ಈ ತಹಸೀಲ್ದಾರ್ಗೆ ಮಾತ್ರ ಈ ಪರಿಸ್ಥಿತಿಯಲ್ಲೂ ಮೋಜು ಮಸ್ತಿಯ ಆಟ. ನನ್ನಿವಾಳ ಗ್ರಾಮದ ಬಳಿಯ ಕೆರೆ ಕೋಡಿ ಬಿದ್ದ ಸ್ಥಳದಲ್ಲಿ ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ಅವರು ಮಲಗಿ ಹೊರಳಾಡಿದ್ದಾರೆ. ಮುಂಜಾಗೃತೆಗೆ ಸೂಚಿಸುವ ಬದಲು ನೀರಿಗಿಳಿದು ಹೊರಳಾಡಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Sep 10, 2022 11:19 AM