ಶಾಂತಿ ಸಭೆಯಲ್ಲಿ ಅಶಾಂತಿ: ಚಿತ್ತಾಪುರ RSS ಪಥಸಂಚಲನ ಚೆಂಡು ಹೈಕೋರ್ಟ್ ಅಂಗಳಕ್ಕೆ
ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ನಡೆಯುತ್ತಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ ಕೊರ್ಟ್ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸುವಂತೆ ಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಸಭೆ ಅಶಾಂತಿಯಲ್ಲೇ ಅಂತ್ಯವಾಗಿದೆ.
ಕಲಬುರಗಿ, (ಅಕ್ಟೋಬರ್ 29): ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರವಾದ ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ಸಂಘರ್ಷ ನಡೆಯುತ್ತಿದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ ಕೊರ್ಟ್ ಮುಂದೆ ತಿಳಿಸಿದ್ದು, ಈ ಸಂಬಂಧ ಶಾಂತಿ ಸಭೆ ನಡೆಸುವಂತೆ ಕೋರ್ಟ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಕಲಬುರಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾರೀ ಹೈಡ್ರಾಮಾವೇ ನಡೆದಿದ್ದು, ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆ ಯಾವುದೇ ಅಂತಿಮ ನಿರ್ಧಾರಕ್ಕೆ ಬರದೇ ಸಭೆ ಅಶಾಂತಿಯಲ್ಲೇ ಅಂತ್ಯವಾಗಿದೆ. ಹೀಗಾಗಿ ಆರ್ಎಸ್ಎಸ್ ಚಿತ್ತಾಪುರ ಪಥಸಂಚಲನ ಚೆಂಡು ಕೋರ್ಟ್ ಅಂಗಳಕ್ಕೆ ಹೋಗಿದ್ದು, ಅಕ್ಟೋಬರ್ 30ರಂದು ಕೋರ್ಟ್ ಯಾವ ತೀರ್ಫು ನೀಡಲಿದೆ ಎನ್ನುವ ಕುತೂಹಲ ಮೂಡಿಸಿದೆ. ಹೀಗಾಗಿ ಎಲ್ಲರ ಚಿತ್ತ ಇದೀಗ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದತ್ತ ನೆಟ್ಟಿದೆ.
