Belagavi: ಚೋರ್ಲಾ ಘಾಟ್ ರಾಬರಿ ರಹಸ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ
ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ಸವಾಲಿನಿಂದ ಕೂಡಿದೆ. ಮಹಾರಾಷ್ಟ್ರ ಎಸ್‌ಐಟಿ ರಚಿಸಿದ್ದರೂ, ಕರ್ನಾಟಕ ಪೊಲೀಸರಿಗೆ ಮಾಹಿತಿ ಹಂಚಿಕೆಯಾಗಿಲ್ಲ ಎಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಮತ್ತು ಸಿಸಿಟಿವಿ ಇಲ್ಲದಿರುವುದು ತನಿಖೆಗೆ ಅಡ್ಡಿಯಾಗಿದೆ ಎಂದವರು ಹೇಳಿದ್ದಾರೆ.
ಬೆಳಗಾವಿ, ಜನವರಿ 25: ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ರಾಬರಿ ಪ್ರಕರಣ ಸಂಬಂಧ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜ.6ರಂದು ನಾಸಿಕ್ ಜಿಲ್ಲಾ ವರಿಷ್ಠಾಧಿಕಾರಿಯಿಂದ ನಮಗೆ ಪತ್ರ ಬಂದಿದ್ದು, ಚೋರ್ಲಾ ಘಾಟ್‌ನಲ್ಲಿ ರಾಬರಿಯಾಗಿರುವ ವಿಷಯ ಅದರಲ್ಲಿ ತಿಳಿಸಲಾಗಿತ್ತು. ರಾಬರಿ ಆದ ಹಣದ ಮೊತ್ತ ನಾಲ್ಕನೂರು ಕೋಟಿ ಆಗಿರಬಹುದು ಅಂತಾ ಪತ್ರದಲ್ಲಿ ಇತ್ತು. ಈ ಕಾರಣಕ್ಕೆ ನಮ್ಮ ಖಾನಾಪುರದ ಸಬ್ ಇನ್ಸ್ಪೆಕ್ಟರ್ ಸೇರಿ ಒಂದು ತಂಡವನ್ನ ಕಳುಹಿಸಿದ್ದೇವೆ. ಎಸ್ಐಟಿ ತಂಡ ಕೂಡ ರಚನೆ ಆಗಿದೆ. ಘಟನೆ ಬಗ್ಗೆ ಯಾರು ದೂರು ನೀಡಿದರೂ ಪಡೆಯುತ್ತೇವೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸರು ತನಿಖೆ ಮಾಡುತ್ತಿದ್ದುಮ ನಾವು ಸಹಕಾರ ಕೊಡುತ್ತೇವೆ. ಚೋರ್ಲಾ ಘಾಟ್ ಮೂರು ರಾಜ್ಯಗಳ ವ್ಯಾಪ್ತಿಯಲ್ಲಿ ಬರಲಿದೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
