ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ; ಶಾಂತಾ ಹೊಸಮನಿ-ಮಮಿತಾ ಲಿಂಕ್ ಬಗ್ಗೆಯೂ ತನಿಖೆ

Edited By:

Updated on: Sep 09, 2026 | 4:48 PM

ಪಶು ವೈದ್ಯಾಧಿಕಾರಿ ಹುದ್ದೆ ಅಕ್ರಮದ ತನಿಖೆ ತೀವ್ರಗೊಳಿಸಿರುವ ಸಿಐಡಿ, ಕಲಬುರ್ಗಿಯ ಮಮಿತಾ ಮನೆ ಮೇಲೆ ದಾಳಿ ನಡೆಸಿದೆ. ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಮೂಲಕ ಮಮಿತಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದ್ದು, ನಾಪತ್ತೆಯಾಗಿರುವ ಶಾಂತಾ ಹೊಸಮನಿಗಾಗಿ ಹುಡುಕಾಟ ನಡೆಸಿರುವ ಸಿಐಡಿ, ಈ ಡೀಲ್‌ನ ಇನ್ನಷ್ಟು ಸುಳಿವುಗಳನ್ನು ಪತ್ತೆ ಹಚ್ಚಲು ಮುಂದಾಗಿದೆ.

ಕಲಬುರಗಿ, ಸೆಪ್ಟೆಂಬರ್​​ 09: ಕೆಪಿಎಸ್​​ಸಿ ಪಶುವೈಧ್ಯಾಧಿಕಾರಿ ನೇಮಕಾತಿ ಅಕ್ರಮ ಸಂಬಂಧ ಸಿಐಡಿ ತನಿಖೆ ಕಲಬುರಗಿವರೆಗೂ ವ್ಯಾಪಿಸಿದ್ದು, ಇಷ್ಟು ದಿನ ಮಧ್ಯವರ್ತಿಗಳು-ಕೆಪಿಎಸ್ ಸಿ ಅಧಿಕಾರಿಗಳ‌ ಮೇಲೆ ದಾಳಿ ಮಾಡಿದ್ದ ಸಿಐಡಿ ಇವತ್ತು ಓರ್ವ ಅಭ್ಯರ್ಥಿ ಮನೆ ಮೇಲೆ‌ ದಾಳಿ ಮಾಡಿ ಶಾಕ್ ಕೊಟ್ಟಿದೆ. ಕೆಪಿಎಸ್​​ಸಿ ಸದಸ್ಯೆ ಶಾಂತಾ ಹೊಸಮನಿ ಮೂಲಕ‌ ಡೀಲ್‌ ಮಾಡಿಕೊಂಡು ಹುದ್ದೆ ಪಡೆಯೋಕೆ ಯತ್ನಿಸಿದ ಆರೋಪದ‌ ಹಿನ್ನೆಲೆ ಕಲಬುರಗಿ‌ ನಗರದ ನ್ಯೂ ಓಜಾ ಬಡಾವಣೆಯ ಮಮಿತಾ ಎಂಬವರ ಮನೆ ಮೇಲೆ ಅಧಿಕಾರಿಗಳು ರೇಡ್​​ ನಡೆಸಿದ್ದಾರೆ. ‌ಮಮಿತಾ ಎಷ್ಡು ಹಣಕ್ಕೆ‌ ಡೀಲ್‌ ಮಾಡಿದ್ದರು, ಯಾವ ಹುದ್ದೆಗೆ ಡೀಲ್‌ ಮಾಡಿದ್ದರು ಎಂಬ ಬಗ್ಗೆ ಅಧಿಕಾರಿಗಳು ದಾಖಲೆ‌ ಕಲೆಹಾಕುತ್ತಿದ್ದು,‌ ನಾಪತ್ತೆಯಾಗಿರೋ ಕೆಪಿಎಸ್​​ಸಿ ಸದಸ್ಯೆ ಶಾಂತಾ ಹೊಸಮನಿಗೂ ಮಮಿತಾಗೂ ಇರೋ ಲಿಂಕ್ ಬಗ್ಗೆಯೂ ಸಿಐಡಿ ಶೋಧ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Sep 09, 2026 04:47 PM
Loading...
Unable to load recommendations.
Follow Us
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More