ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ
ಗಿಲ್ಲಿ ನಟ ಆಡಿದ ಕೆಲವು ಮಾತಿನಿಂದ ಚೈತ್ರಾ ಕುಂದಾಪುರ ಅವರಿಗೆ ಬೇಸರ ಆಗಿದೆ. ವಯಸ್ಸಿನ ವಿಚಾರದಲ್ಲಿ ವ್ಯಂಗ್ಯವಾಡಿದ ಗಿಲ್ಲಿಗೆ ಚೈತ್ರಾ ಅವರು ತಿರುಗೇಟು ನೀಡಿದ್ದಾರೆ. ಒಂದೆರಡು ಬಾರಿ ಎಚ್ಚರಿಕೆ ನೀಡಿದ ನಂತರವೂ ಗಿಲ್ಲಿ ಬದಲಾಗಿಲ್ಲ. ಹಾಗಾಗಿ ಚೈತ್ರಾ ಕುಂದಾಪುರ ಮತ್ತು ಗಿಲ್ಲಿ ನಡುವೆ ಮಾತಿಗೆ ಮಾತು ಬೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ (Chaithra Kundapura) ಅವರು ಜಗಳದಿಂದಲೇ ಹೆಚ್ಚು ಫೇಮಸ್. ಕಳೆದ ಸೀಸನ್ನಲ್ಲಿ ಅವರು ಹಲವು ಬಾರಿ ಜಗಳ ಮಾಡಿದ್ದರು. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದಾರೆ. ಗಿಲ್ಲಿ ನಟ (Gilli Nata) ಆಡಿದ ಕೆಲವು ಮಾತಿನಿಂದ ಚೈತ್ರಾ ಕುಂದಾಪುರ ಅವರಿಗೆ ಬೇಸರ ಆಗಿದೆ. ವಯಸ್ಸಿನ ವಿಚಾರದಲ್ಲಿ ವ್ಯಂಗ್ಯವಾಡಿದ ಗಿಲ್ಲಿಗೆ ಚೈತ್ರಾ ಅವರು ತಿರುಗೇಟು ನೀಡಿದ್ದಾರೆ. ಒಂದೆರಡು ಬಾರಿ ಎಚ್ಚರಿಕೆ ನೀಡಿದ ನಂತರವೂ ಗಿಲ್ಲಿ ಬದಲಾಗಿಲ್ಲ. ಹಾಗಾಗಿ ಚೈತ್ರಾ ಕುಂದಾಪುರ ಮತ್ತು ಗಿಲ್ಲಿ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಗ್ ಬಾಸ್ ಮನೆ ಈಗ ರಣರಂಗ ಆಗಿದೆ. ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಗಿಲ್ಲಿ ಕಾಮಿಡಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಬಹುತೇಕರು ಕಳಪೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
