ಕುಮಾರಸ್ವಾಮಿ ಮತ್ತು ರೇವಣ್ಣ ಮಾತಾಡಿದ್ದು ನೋಡಿದರೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅಂತ ಗೊತ್ತಾಗಿಬಿಡುತ್ತದೆ!

Arun Kumar Belly

|

Updated on:Mar 03, 2023 | 7:12 PM

ಯಾವುದು ಸರಿ ಯಾವುದು ತಪ್ಪು ನಮಗಂತೂ ಗೊತ್ತಾಗುತ್ತಿಲ್ಲ. ಈ ದೃಶ್ಯ ನೋಡಿದರೆ ಮಾತ್ರ ಭವಾನಿ ರೇವಣ್ಣಗೆ ಟಿಕೆಟ್ ಖಚಿತ ಅನಿಸುತ್ತದೆ!

ರಾಮನಗರ: ಅನಾರೋಗ್ಯದಿಂದ ಬಳಲುತ್ತಿರುವ ಜೆಡಿಎಸ್ ಪಕ್ಷದ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಬೇಗ ಸ್ವಸ್ಥರಾಗಲು ಅವರ ಕುಟುಂಬದ ಸದಸ್ಯರು ರಾಮನಗರದಲ್ಲಿ ಚಂಡಿಕಾ ಯಾಗ ಮಾಡಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರಿಂದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ಕೂಡ ಅಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಹಿರಿಯ ಸಹೋದರ ಹೆಚ್ ಡಿ ರೇವಣ್ಣ (HD Revanna) ಅತ್ಯಂತ ಆತ್ಮೀಯತೆ, ಪ್ರೀತಿಯಿಂದ ಗಹನವಾದ ಚರ್ಚೆ ಮಾಡುತ್ತಿರುವುದನ್ನು ನೋಡಬಹುದು. ಹಾಸನ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ಭಿನ್ನಭಿಪ್ರಾಯವಿದೆ ಅಂತ ಮಾಧ್ಯಮಗಳಲ್ಲಿ ಪ್ರತಿದಿನ ವರದಿಯಾಗುತ್ತಿದೆ. ಆದರೆ ಇವರಿಬ್ಬರು ಮಾತಾಡುತ್ತಿರುವುದನ್ನು ನೋಡುತ್ತಿದ್ದರೆ ಹಾಗನಿಸದು ಮಾರಾಯ್ರೇ. ಯಾವುದು ಸರಿ ಯಾವುದು ತಪ್ಪು ನಮಗಂತೂ ಗೊತ್ತಾಗುತ್ತಿಲ್ಲ. ಈ ದೃಶ್ಯ ನೋಡಿದರೆ ಮಾತ್ರ ಭವಾನಿ ರೇವಣ್ಣಗೆ ಟಿಕೆಟ್ ಖಚಿತ ಅನಿಸುತ್ತದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada