Defends Ramesh Jarkiholi: ದ್ವಂದ್ವ ಹೇಳಿಕೆಯೊಂದನ್ನು ನೀಡಿ ಗೊಂದಲ ಮೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Defends Ramesh Jarkiholi: ದ್ವಂದ್ವ ಹೇಳಿಕೆಯೊಂದನ್ನು ನೀಡಿ ಗೊಂದಲ ಮೂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 13, 2023 | 5:50 PM

ನಮ್ಮ ಸಚಿವರ ಪೈಕಿ ಯಾರೊಬ್ಬರೂ ವೈಯಕ್ತಿಕವಾಗಿ ಮತ್ತು ಪಕ್ಷದ ಇಮೇಜಿಗೆ ಧಕ್ಕೆಯಾಗುವ ಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಇಂಥ ಬೆದರಿಕೆಗಳಿಗೆ ಹೆದರಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಗದಗ: ಜಿಲ್ಲೆಯಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಒಂದು ದ್ವಂದ್ವ ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಿಡಿಯೊಂದನ್ನು ಇಟ್ಕೊಂಡು ರಾಜ್ಯ ಸಂಪುಟದ ಮಂತ್ರಿಯೊಬ್ಬರನ್ನು ಕಾಂಗ್ರೆಸ್ ಸೇರುವಂತೆ ಬ್ಲ್ಯಾಕ್ ಮೇಲ್ ಮಾಮಡುತ್ತಿರುವರೆಂದು ರಮೇಶ್ ಜಾರಕಿಹೊಳಿ (Ramesh Jarkiholi) ಆರೋಪಿಸಿರುವುದನ್ನು ಮಾಧ್ಯಮವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ರಮೇಶ್ ಅವರಲ್ಲಿ ಸಿಡಿ ಬಗ್ಗೆ ಮಾಹಿತಿ ಇರಬಹುದು ಆದರೆ, ನಮ್ಮ ಸಚಿವರ ಪೈಕಿ ಯಾರೊಬ್ಬರೂ ವೈಯಕ್ತಿಕವಾಗಿ ಮತ್ತು ಪಕ್ಷದ ಇಮೇಜಿಗೆ ಧಕ್ಕೆಯಾಗುವ ಕೃತ್ಯಗಳಲ್ಲಿ ಭಾಗಿಯಾಗಿಲ್ಲ, ಇಂಥ ಬೆದರಿಕೆಗಳಿಗೆ ಹೆದರಲ್ಲ ಎಂದು ಹೇಳಿದರು. ಸಿಡಿ ಇರಬಹುದು ಅಂತ ಹೇಳುತ್ತಾರೆ ಮತ್ತು ತಮ್ಮ ಸಹೋದ್ಯೋಗಿಗಳನ್ನು ವಹಿಸಿಕೊಂಡು ಸಹ ಮಾತಾಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ