ಮುಖ್ಯಮಂತ್ರಿಗಳ ಎಸ್ಕಾರ್ಟ್ ವಾಹನ ಹಿರಿಯೂರಲ್ಲಿ ಪಲ್ಟಿ, ಪೊಲೀಸ್ ಸಿಬ್ಬಂದಿಗೆ ಗಾಯ
ಎಸ್ಕಾರ್ಟ್ ವಾಹನ ವೇಗವಾಗಿ ಬರುತ್ತಿರಬೇಕಾದರೆ ದ್ವಿಚಕ್ರ ವಾಹನವೊಂದು ಅದಕ್ಕೆ ಅಡ್ಡ ಬರುತ್ತದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಚಾಲಕ ಜೋರಾಗಿ ಬ್ರೇಕ್ ಅದುಮಿದಾಗ ಅದು ಪಲ್ಟಿಯಾಗಿದೆ.
ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಎಸ್ಕಾರ್ಟ್ ವಾಹನ (escort van) ಪಲ್ಟಿಯಾಗದ ದುರ್ಘಟನೆ ಇಂದು ಹಿರಿಯೂರಲ್ಲಿ ನಡೆದಿದೆ. ಘಟನೆಯಲ್ಲಿ ಸಿಪಿಐ ರಮಾಕಾಂತ್ (CPI Ramakanth ) ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿಗೆ ಗಾಯಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಪಲ್ಟಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತಕ್ಕೆ ಕಾರಣ ಏನು ಅನ್ನೋದು ಅದರಲ್ಲಿ ದೃಶ್ಯಾವಳಿಯಲ್ಲಿ ಗೊತ್ತಾಗುತ್ತದೆ. ಎಸ್ಕಾರ್ಟ್ ವಾಹನ ವೇಗವಾಗಿ ಬರುತ್ತಿರಬೇಕಾದರೆ ದ್ವಿಚಕ್ರ ವಾಹನವೊಂದು ಅದಕ್ಕೆ ಅಡ್ಡ ಬರುತ್ತದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಚಾಲಕ ಜೋರಾಗಿ ಬ್ರೇಕ್ ಅದುಮಿದಾಗ ಅದು ಪಲ್ಟಿಯಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ