Karnataka Budget 2023: ಎಐಸಿಸಿ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಮೂರು ಪದಗಳಲ್ಲಿ ಬಜೆಟ್ ವರ್ಣಿಸಿದರು, ಕಿವಿ-ಮೇಲೆ-ಹೂ!

|

Updated on: Feb 17, 2023 | 4:02 PM

2022-23 ಸಾಲಿನ ಬಜೆಟ್ ನಲ್ಲಿ 349 ಹೊಸ ಯೋಜನೆಗಳ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಅವುಗಳಲ್ಲಿ ಯಾವುದನ್ನೂ ನೆರವೇರಿಸಲಿಲ್ಲ ಎಂದು ಸುರ್ಜೆವಾಲಾ ದೂರಿದರು.

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿಧಾನಸಭೆಯಲ್ಲಿ ಮಂಡಿಸಿದ 2023-24 ನೇ ಸಾಲಿನ ಬಜೆಟ್ ಗೆ ಹುಬ್ಬಳ್ಳಿಯಲ್ಲಿಂದು ಪ್ರತಿಕ್ರಿಯಿಸಿದ ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಅದನ್ನು ಮೂರು ಕನ್ನಡ ಪದಗಳಲ್ಲಿ ಬಣ್ಣಿಸಿದರು. ಕಿವಿ-ಮೇಲೆ-ಹೂ! ಈ ಬಜೆಟ್ ಒಂದು ಸುಳ್ಳು ಭರವಸೆಗಳ ಕಂತೆ, ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ (PM Narendra Modi) ಸುಳ್ಳು ಹೇಳುವುದನ್ನು ಚೆನ್ನಾಗೇ ಕಲಿತಿದ್ದಾರೆ ಎಂದು ಸುರ್ಜೆವಾಲಾ ಹೇಳಿದರು. 2022-23 ಸಾಲಿನ ಬಜೆಟ್ ನಲ್ಲಿ 349 ಹೊಸ ಯೋಜನೆಗಳ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಅವುಗಳಲ್ಲಿ ಯಾವುದನ್ನೂ ನೆರವೇರಿಸಲಿಲ್ಲ ಎಂದು ಅವರು ದೂರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ