ಬಜೆಟ್ ಮಂಡನೆಯಾದ ಬಳಿಕ ಸಿದ್ದರಾಮಯ್ಯರ ಕೋಣೆಗೆ ತೆರಳಿ ಮಾತುಕತೆ ನಡೆಸಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ
ಪ್ರಾಯಶಃ ಅದಕ್ಕೆ ಪೂರ್ವಭಾವಿಯಾಗೇ ಇಂದು ಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕೋಣೆಗೆ ತೆರಳಿ ಮಾತುಕತೆ ನಡೆಸಿದರು
ಬೆಂಗಳೂರು: ಅರಸೀಕೆರೆ ಶಾಸಕ ಕೆಎಮ್ ಶಿವಲಿಂಗೇಗೌಡರ (KM Shivalingegowda) ಜೆಡಿಎಸ್ ದಿನಗಳು ಆಲ್ಮೋಸ್ಟ್ ಕೊನೆಗೊಂಡಿವೆ ಮಾರಾಯ್ರೇ. ಪಕ್ಷದ ವರಿಷ್ಠರ ಧೋರಣೆಯಿಂದ ಅವರು ಬೇಸತ್ತ ವಿಷಯ ಜಗಜ್ಜಾಹೀರುಗೊಂಡು ಬಹಳ ದಿನ ಕಳೆದವು. ಅವರು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಇಷ್ಟರಲ್ಲೇ ಸೇರಲಿದ್ದಾರೆ. ಪ್ರಾಯಶಃ ಅದಕ್ಕೆ ಪೂರ್ವಭಾವಿಯಾಗೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಿದ ಬಳಿಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕೋಣೆಗೆ ತೆರಳಿ ಮಾತುಕತೆ ನಡೆಸಿದರು. ಮಾತುಕತೆಯ ವಿವರ ನಮಗೆ ಗೊತ್ತಾಗಿಲ್ಲ, ಆದರೆ ಶಿವಲಿಂಗೇಗೌಡರು ಸಿದ್ದರಾಮಯ್ಯನವರ ಕೋಣೆ ಪ್ರವೇಶಿಸುವ ವಿಡಿಯೋ ನಮಗೆ ಲಭ್ಯವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos