Assembly Polls: ರಮ್ಯಾ ನನ್ನ ವಿರುದ್ಧ ಸ್ಪರ್ಧಿಸಬಯಸಿದರೆ ಸ್ವಾಗತಿಸುತ್ತೇನೆ, ಸೋಲುಗಳು ನನ್ನನ್ನು ವಿಚಲಿತಗೊಳಿಸುವುದಿಲ್ಲ: ಹೆಚ್ ಡಿ ಕುಮಾರಸ್ವಾಮಿ
ಹೆಚ್ಚೆಂದರೆ ಏನು ಆಗುತ್ತದೆ? ನಾನು ಸೋಲಬಹುದು. ಸೋಲುಗಳಿಂದ ನಾನು ವಿಚಲಿತನಾಗುವವನಲ್ಲ, ಸೋಲು ಮತ್ತು ಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದರು.
ರಾಮನಗರ: ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ರಾಮನಗರ ಜಿಲ್ಲೆಯನ್ನು ಅಬಿವೃದ್ಧಿ ಮಾಡಿದ್ದು ತಾವು ಆದರೆ ಬೇರೆಯವರು ಅದರ ಶ್ರೇಯಸ್ಸು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಂತ ಹೇಳಿದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯನ್ನು ಕಟ್ಟಿಹಾಕಲು ಚಿತ್ರನಟಿ ಮತ್ತು ಮಾಜಿ ಸಂಸದೆ ರಮ್ಯಾ (Ramya) ಅವರು ನಿಲ್ಲಿಸುವ ಯೋಚನೆ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಪತ್ರಕರ್ತರು ಮತ್ತೊಮ್ಮೆ ಅವರಿಗೆ ಹೇಳಿದಾಗ ಜೆಡಿಎಸ್ ನಾಯಕ, ರಮ್ಮಾ ನನಗೆ ಸಹೋದರಿಯಂತೆ, ಆಕೆ ಸ್ಪರ್ಧಿಸಬಯಸಿದರೆ ಸ್ವಾಗತಿಸುತ್ತೇನೆ, ಹೆಚ್ಚೆಂದರೆ ಏನು ಆಗುತ್ತದೆ? ನಾನು ಸೋಲಬಹುದು. ಸೋಲುಗಳಿಂದ ನಾನು ವಿಚಲಿತನಾಗುವವನಲ್ಲ, ಸೋಲು ಮತ್ತು ಗೆಲುವು ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ