AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CM at a hotel: ಬೆಳ್ಳಂಬೆಳಗ್ಗೆಯೇ ಖಾಸಗಿ ಹೋಟೆಲೊಂದಕ್ಕೆ ತೆರಳಿ ಮಸಾಲೆ ದೋಸೆ ಚಪ್ಪರಿಸಿದ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

CM at a hotel: ಬೆಳ್ಳಂಬೆಳಗ್ಗೆಯೇ ಖಾಸಗಿ ಹೋಟೆಲೊಂದಕ್ಕೆ ತೆರಳಿ ಮಸಾಲೆ ದೋಸೆ ಚಪ್ಪರಿಸಿದ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 25, 2023 | 12:38 PM

Share

ವಿಐಪಿಗಳು ಹೋಟೆಲಿಗೆ ಬಂದಾಗ ಅದರ ಮಾಲೀಕ ಬಹಳ ಸಂತೋಷ ಪಡುವುದೇನೋ ನಿಜ, ಆದರೆ; ಅವರನ್ನು ನೋಡಲು ಆಗಮಿಸುವ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೀಗೆ ಮಾಡುತ್ತಿದ್ದರು. ತಮ್ಮ ಸಂಪುಟದ ಸಹೋದ್ಯೋಗಿಗಳನ್ನು, ಶಾಸಕರನ್ನು ಜೊತೆಗೂಡಿಸಿಕೊಂಡು ಯಾವುದಾದರೂ ಹೆಸರುವಾಸಿ ಹೋಟೆಲ್ ಗೆ ನುಗ್ಗಿ ಅಲ್ಲಿನ ಹೆಚ್ಚು ಜನಪ್ರಿಯ ತಿಂಡಿಗಳನ್ನು ಅವರು ಸವಿಯುತ್ತಿದ್ದರು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕೂಡ ಇಂದು ಸಚಿವರಾದ ಆರ್ ಅಶೋಕ (R Ashoka) ಮತ್ತು ಬಿಸಿ ನಾಗೇಶ (BC Nagesh) ಅವರೊಂದಿಗೆ ಬೆಳ್ಳಂಬೆಳಗ್ಗೆಯೇ ನಗರದ ಖ್ಯಾತ ಹೋಟೆಲೊಂದರಲ್ಲಿ ಮಸಾಲೆ ದೋಸೆ ತಿಂದರು. ವಿಐಪಿಗಳು ಹೋಟೆಲಿಗೆ ಬಂದಾಗ ಅದರ ಮಾಲೀಕ ಬಹಳ ಸಂತೋಷ ಪಡುವುದೇನೋ ನಿಜ, ಆದರೆ; ಅವರನ್ನು ನೋಡಲು ಆಗಮಿಸುವ ಜನರನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.