Basavaraj Bommai: ಹುಟ್ಟುಹಬ್ಬದ ಹಿನ್ನೆಲೆ ತಂದೆ-ತಾಯಿ ಸಮಾಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಮುಖ್ಯಮಂತ್ರಿ ಬೊಮ್ಮಾಯಿ
ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕರಾದ್ರು. ಸಮಾಧಿ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಹುಬ್ಬಳ್ಳಿ: ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಹುಬ್ಬಳ್ಳಿಯ ನಂದಿ ಬಡಾವಣೆಯಲ್ಲಿರುವ ತಂದೆ-ತಾಯಿಯ ಸಮಾಧಿಗೆ ಸಿಎಂ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವ ಗೋವಿಂದ ಕಾರಜೋಳ ಸಾಥ್ ನೀಡಿದ್ದಾರೆ.
ಇನ್ನು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ತಂದೆ ತಾಯಿಯನ್ನು ನೆನೆದು ಸಿಎಂ ಭಾವುಕರಾದ್ರು. ಸಮಾಧಿ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಶ್ವಾನದಳ ಹಾಗೂ ಬಾಂಬ್ ನಿಶ್ಕ್ರಿಯ ದಳದಿಂದ ಪರಶೀಲನೆ ನಡೆಯುತ್ತಿದೆ.
Published on: Jan 28, 2023 12:06 PM