ಕಲಬುರಗಿ: ವಿಮಾನ ನಿಲ್ದಾಣದ ಲಾಂಜ್ ಗೆ ಹೋಗಗೊಡದ ಪೊಲೀಸರ ಜೊತೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ
ಅಷ್ಟು ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಒಳಗೆ ಹೋಗಲು ಬಿಡದೆ ಪೊಲೀಸರು ಬಿಜೆಪಿಯ ಏಜೆಂಟ್ ಗಳ ಹಾಗೆ ವರ್ತಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಕೂಗಾಡಿದರು.
ಕಲಬುರಗಿ: ನಗರದ ವಿಮಾನ ನಿಲ್ದಾಣ (airport) ಬಳಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು (Congress workers) ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ತಮ್ಮ ನಾಯಕರನ್ನು ಸ್ವಾಗತಿಸಲು ವಿಮಾನ ನಿಲ್ದಾಣದ ಲಾಂಜ್ ನೊಳಗೆ ಹೋಗಲು ಪೊಲೀಸರು ಅನುಮತಿ ನಿರಾಕರಿಸಿದಾಗ ಕಾರ್ಯಕರ್ತರು ರೊಚ್ಚಿಗೆದ್ದು ವಾಗ್ವಾದಕ್ಕಿಳಿದರು. ಕಾರ್ಯಕರ್ತರಲ್ಲಿ, ವಿಧಾನ ಪರಿಷತ್ ಮಾಜಿ ಉಪಸಭಾಪತಿ ಡೇವಿಡ್ ಸಿಮಯೋನ್ (David Simeon) ಕೂಡ ಇದ್ದರು. ಅಷ್ಟು ದೊಡ್ಡ ಹುದ್ದೆಯಲ್ಲಿದ್ದ ವ್ಯಕ್ತಿಯನ್ನು ಒಳಗೆ ಹೋಗಲು ಬಿಡದೆ ಪೊಲೀಸರು ಬಿಜೆಪಿಯ ಏಜೆಂಟ್ಗಳ ಹಾಗೆ ವರ್ತಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಕೂಗಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 28, 2023 01:12 PM
Latest Videos