77ರ ವಯಸ್ಸಲ್ಲೂ ಜಿಮ್‌ನಲ್ಲಿ ಕಸರತ್ತು ಮಾಡಿದ ರಾಜಾ ಹುಲಿ ಯಡಿಯೂರಪ್ಪ
ಜಿಮ್‌ನಲ್ಲಿ ‘ರಾಜಾ ಹುಲಿ' CM ಬಿಎಸ್‌ವೈ ಕಸರತ್ತು | 77ರ ವಯಸ್ಸಲ್ಲೂ ಜಿಮ್‌ನಲ್ಲಿ ಕಸರತ್ತು ಮಾಡಿದ ಸಿಎಂ ಯಡಿಯೂರಪ್ಪ...., ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 77ರ ಚಿರಯುವಕ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ತಾವು ಇನ್ನು ಜಬರದಸ್ತ್ ಹೆಲ್ತಿಯಾಗಿದ್ದಾನೆ. ಮೈಯಲ್ಲಿ ಇನ್ನು ತಾಕತ್ತು ಇದೆ ಅಂತಾ ಜಿಮ್‌ನಲ್ಲಿ ಕಸರತ್ತು ಮಾಡೋ ಮೂಲಕ ಸಾರಿ ಸಾರಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೆಎಎಸ್ ಅಧಿಕಾರಿಗಳ ಸಂಘದ ಶತಮಾನೋತ್ಸವ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಮ್ ಮಾಡಿ ಗಮನ ಸೇಳೆದ್ರು...ಅಂದ ಹಾಗೇ ಸಿಎಂ ಹೀಗೆ ಜಿಮ್‌ನಲ್ಲಿ ಕಸರತ್ತು ಮಾಡೋ ಮೂಲಕ ಯಾರಿಗೆ ಸಂದೇಶ ಕೊಟ್ರು ಅನ್ನೋದೆ ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ
Published on: Jan 09, 2021 10:20 AM