ಸಿಎಂ ಇಬ್ರಾಹಿಂ ನಮ್ಮ ನಾಯಕರು, ಅವರು ಪಕ್ಷ ಬಿಡಬಾರದು; ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್
ಸ್ಥಾನಮಾನ ಕೇಳುವುದು ತಪ್ಪಲ್ಲ. ಅದು ಪಕ್ಷದ ತೀರ್ಮಾನ. ಹೈಕಮಾಂಡ್ ಹೇಳಿದ ಮೇಲೆ ಯಾರೂ ಮಾತನಾಡಬಾರದು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅನೇಕ ಸ್ಥಾನಮಾನ ನೀಡಿದೆ.
ಬೆಂಗಳೂರು: ಕಾಂಗ್ರೆಸ್ (Congress) ವಿರುದ್ಧ ಸಿಎಂ ಇಬ್ರಾಹಿಂ (CM Ibrahim) ಬಂಡಾಯ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ (NA Haris), ಸ್ಥಾನಮಾನ ಕೇಳುವುದು ತಪ್ಪಲ್ಲ. ಅದು ಪಕ್ಷದ ತೀರ್ಮಾನ. ಹೈಕಮಾಂಡ್ ಹೇಳಿದ ಮೇಲೆ ಯಾರೂ ಮಾತನಾಡಬಾರದು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅನೇಕ ಸ್ಥಾನಮಾನ ನೀಡಿದೆ. ಸಿಎಂ ಇಬ್ರಾಹಿಂ ನಮ್ಮ ನಾಯಕರು, ಅವರು ಪಕ್ಷ ಬಿಡಲ್ಲ. ಅವರು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲವೆಂಬ ನಂಬಿಕೆ ಇದೆ ಅಂತ ತಿಳಿಸಿದರು. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ನಲಪಾಡ್ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ನೀಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಇದ್ದಾರೆ. ಅವರ ನಿರ್ಧಾರದಂತೆ ಮುಂದಿನ ನಡೆ. ಪಕ್ಷದ ವಿರುದ್ಧವಾಗಿ ಮಾತ್ರ ನಾವು ಹೋಗೋದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾರಾಮಾರಿ: ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್
Budget 2022 ಮೊಬೈಲ್ ತಯಾರಿಕಾ ಉದ್ಯಮದ ಏರಿಕೆಯು ಮೇಕ್ ಇನ್ ಇಂಡಿಯಾದ ಯಶಸ್ಸನ್ನು ತೋರಿಸುತ್ತದೆ: ರಾಷ್ಟ್ರಪತಿ ಕೋವಿಂದ್