ಸಿಎಂ ಇಬ್ರಾಹಿಂ ಮಗನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದ ಸಚಿವ ಜಮೀರ್ ಅಹ್ಮದ್, ನೆಕ್ಸ್ಟ್ ತಂದೆಯ ಸರದಿ?

|

Updated on: Apr 05, 2024 | 4:38 PM

ಇಬ್ರಾಹಿಂ ಮತ್ತು ಸಿದ್ದರಾಮಯ್ಯ ನಡುವೆ ದಶಕಗಳ ಸ್ನೇಹ ಮತ್ತು ಹೋಗೋ ಬಾರೋ ಅನ್ನುವ ಸಲುಗೆ ಇದೆ. ಫೈಜ್ ರನ್ನು ಅವರು ಬಾಲ್ಯದಿಂದ ಬಲ್ಲರು. ನಿಮಗೆ ನೆನಪಿರಬಹುದು, ಹಿಂದೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದರು. ಫೈಜ್ ಅಲ್ಲದೆ ಇನ್ನೂ ಹಲವಾರು ಮುಖಂಡರು ಇಂದು ಕಾಂಗ್ರೆಸ್ ಪಕ್ಷ ಸೇರಿದರು.

ಬೆಂಗಳೂರು: ಇದನ್ನು ನಿರೀಕ್ಷಿಸಲಾಗಿತ್ತು. ಜಿಡಿಎಸ್ ಪಕ್ಷದಿಂದ ಹೊರಬಿದ್ದಿರುವ ಹಿರಿಯ ನಾಯಕ ಸಿಎಂ ಇಬ್ರಾಹಿಂ (CM Ibrahim) ಅವರ ಮಗ ಸಿಎಂ ಫೈಜ್ (CM Faiz) ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫೈಜ್ ಅವರನ್ನು ಕಾಂಗ್ರೆಸ್ ಶಾಲು ಹೊದಿಸಿ ಮತ್ತು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ತಂದೆಯ ಹಾಗೆ ಫೈಜ್ ಸಹ ಜೆಡಿಎಸ್ ಪಕ್ಷದಲ್ಲಿದ್ದರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ತರಲು ಸಚಿವ ಜಮೀರ್ ಅಹ್ಮದ್ ಖಾನ್ ನಿರ್ಣಾಯಕ ಪಾತ್ರ ವಹಿಸಿರುವರೆಂದು ಹೇಳಲಾಗಿದೆ. ಇಬ್ರಾಹಿಂ ಮತ್ತು ಸಿದ್ದರಾಮಯ್ಯ ನಡುವೆ ದಶಕಗಳ ಸ್ನೇಹ ಮತ್ತು ಹೋಗೋ ಬಾರೋ ಅನ್ನುವ ಸಲುಗೆ ಇದೆ. ಫೈಜ್ ರನ್ನು ಅವರು ಬಾಲ್ಯದಿಂದ ಬಲ್ಲರು.

ನಿಮಗೆ ನೆನಪಿರಬಹುದು, ಹಿಂದೆ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದರು. ಫೈಜ್ ಅಲ್ಲದೆ ಇನ್ನೂ ಹಲವಾರು ಮುಖಂಡರು ಇಂದು ಕಾಂಗ್ರೆಸ್ ಪಕ್ಷ ಸೇರಿದರು. ಮಗ ಕಾಂಗ್ರೆಸ್ ಸೇರಿಯಾಯ್ತು, ಪ್ರಾಯಶ: ಇಬ್ರಾಹಿಂ ಸಹ ಕಾಂಗ್ರೆಸ್ ಸೇರುವುದನ್ನು ನಾವು ಇಷ್ಟರಲ್ಲೇ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಎಲ್ಲಿ ಹೋದರೂ ಸಿದ್ದರಾಮಯ್ಯರದ್ದೇ ಹವಾ, ಸಿಎಂ ಜತೆ ಸೆಲ್ಫಿಗೆ ಮುಗಿದ್ದ ಮಹಿಳೆಯರು

Follow us on