ಬಾಗಲಕೋಟೆಯ ಕಾರ್ಯಕ್ರಮವೊಂದರಲ್ಲಿ ತಮ್ಮ ಕನ್ನಡ ಪಾಂಡಿತ್ಯ ಮತ್ತೊಮ್ಮೆ ಪ್ರದರ್ಶಿಸಿದ ಸಿಎಂ ಸಿದ್ದರಾಮಯ್ಯ!
ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಸ್ಪರ್ಧಿಸಲು ಪತ್ನಿ ವೀಣಾಗಾಗಿ ವಿಜಯಾನಂದ ಕಾಶಪ್ಪನವರ್ ಟಿಕೆಟ್ ಯಾಚಿಸುತ್ತಿದ್ದಾರೆ. 2019ರ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವೀಣಾ, ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ವಿರುದ್ಧ ಸೋತರೂ ಸುಮಾರು 5 ಲಕ್ಷ ವೋಟು ಗಳಿಸಿದ್ದರು.
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕನ್ನಡ ಪಂಡಿತ ಅಥವಾ ಕನ್ನಡ ಮೇಷ್ಟ್ರು ಅಲ್ಲದಿದ್ದರೂ ಕನ್ನಡ ವ್ಯಾಕರಣವನ್ನು ಚೆನ್ನಾಗಿ ಬಲ್ಲರು. ಭಾಷೆಯ ಮೇಲಿನ ಹಿಡಿತವನ್ನು ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಹಲವಾರು ಬಾರಿ ಪ್ರದರ್ಶಿಸಿದ್ದಾರೆ. ಸಿದ್ದರಾಮಯ್ಯ ಇಂದು ಬಾಗಲಕೋಟೆಯಲ್ಲಿದ್ದರು. ಯಾಕೆ ಅಂತ ಮೊನ್ನೆ ವಿಜಯಪುರದ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗುವ ಮೊದಲು ವಿಡಿಯೋ ಮೂಲಕ ಸಂದೇಶವೊಂದನ್ನು ರವಾನಿಸಿದ್ದ ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಅವರ ಪತ್ನಿ ವೀಣಾ ಕಾಶಪ್ಪನವರ್ (Veena Kashappanavar) ಹೇಳಿದ್ದರು. ಸಿದ್ದರಾಮಯ್ಯ ವಿವಿಕೆ ಫೌಂಡೇಶನ್ ಕೋಚಿಂಗ್ ಕೋಚಿಂಗ್ ಸೆಂಟರ್ ಉದ್ಘಾಟಿಸಲು ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತಾಡುವಾಗ ವೇದಿಕೆ ಮೇಲೆ ಅವರ ಎಡಭಾಗದಲ್ಲಿ ನಿಂತಿದ್ದ ವಿಜಯಾನಂದ ಕಡೆ ನೋಡಿ, ವಿಜಯ ಅನಂದ, ವಿಜಯ ಪ್ಲಸ್ ಆನಂದ, ಅಂತ ಹೇಳಿ ಇದು ಸವರ್ಣದೀರ್ಘ ಸಂಧಿ ಅಂತ ನಿಂಗೊತ್ತಾ ಅಂತ ಕೇಳಿದಾಗ; ವೀಣಾ, ವಿಜಯಾನಂದ ಸೇರಿದಂತೆ ಕಾರ್ಯಕ್ರಮಕ್ಕೆ ಸೇರಿದ್ದ ಜನರೆಲ್ಲ ನಗೆಗಡಲಲ್ಲಿ ತೇಲಿದರು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ