ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕರ್ನಾಟಕ ಭವನದಿಂದ ಒಟ್ಟಿಗೆ ಎಐಸಿಸಿ ಕಚೇರಿಗೆ ತೆರಳಿದರು

ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಕರ್ನಾಟಕ ಭವನದಿಂದ ಒಟ್ಟಿಗೆ ಎಐಸಿಸಿ ಕಚೇರಿಗೆ ತೆರಳಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 04, 2024 | 12:42 PM

ಮುಂಬರುವ ಲೋಕಸಭಾ ಚುನಾವಣೆಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧತೆ ಮತ್ತು ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಎಐಸಿಸಿ ದೆಹಲಿಗೆ ಕರೆಸಿದೆ. ನಿಗಮ/ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ, ಅದರ ಬಗ್ಗೆಯೂ ಕಾಂಗ್ರೆಸ್ ನಾಯಕರ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ದೆಹಲಿ: ಜನವರಿ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ತೆರಳಲಿರುವ ಬಗ್ಗೆ ನಾವು ಮೂರು ದಿನಗಳ ಹಿಂದೆ ವರದಿ ಮಾಡಿದ್ದೆವು. ದೆಹಲಿಯ ಕರ್ನಾಟಕ ಭವನದಿಂದ ಇಂದು ಅವರಿಬ್ಬರು ಎಐಸಿಸಿ ಕಚೇರಿಗೆ (AICC office) ಜೊತೆಯಾಗಿ ತೆರಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಭವನದಿಂದ ಶಿವಕುಮಾರ್ ಮೊದಲು ಹೊರಬಿದ್ದು ಮುಂದೆ ಸಾಗುತ್ತಾರಾದರೂ, ಸ್ವಲ್ಪ ಸಮಯದ ಬಳಿಕ ಸಿದ್ದರಾಮಯ್ಯರನ್ನು ಮುಂದೆ ಹೋಗಲು ಬಿಟ್ಟು ಒಂದು ಹೆಜ್ಜೆ ಹಿಂದೆ ಸರಿಯುತ್ತಾರೆ. ಮುಖ್ಯಮಂತ್ರಿ ಇದ್ದೆಡೆಯೆಲ್ಲ ಅವರ ಪೊಲಿಟಿಕಲ್ ಸೆಕ್ರೆಟರಿ ಗೋವಿಂದರಾಜ್ ಕಾಣೋದು ವಾಡಿಕೆಯಾಗಿದೆ, ಇಲ್ಲೂ ಅವರನ್ನು ನೋಡಬಹುದು. ಶಿವಕುಮಾರ್ ನಾಯಕರೊಬ್ಬರ ಜೊತೆ ಮಾತಾಡುವಾಗ ಯಾವುದೋ ವಿಷಯಕ್ಕೆ ಸಿಡುಕುವ ಹಾಗೆ ಗೋಚರಿಸುತ್ತಾರೆ. ಕರ್ನಾಟಕ ಭವನದಿಂದ ಆಚೆಬಂದು ಕಾರು ಹತ್ತುವಾಗ ಇಂಗ್ಲಿಷ್ ಮಾಧ್ಯಮದ ವರದಿಗಾರರೊಬ್ಬರು, ಬಿಕೆ ಹರಿಪ್ರಸಾದ್ ಮತ್ತು ಯತೀಂದ್ರ ಸಿದ್ದರಾಮಯ್ಯ ಮೀಡಿರುವ ಹೇಳಿಕೆಗಳ ಬಗ್ಗೆ ಕಾಮೆಂಟ್ ಮಾಡಬಯಸುತ್ತೀರಾ ಅಂತ ಕೇಳಿದಾಗ, ಸಿದ್ದರಾಮಯ್ಯ ನೋ ಕಾಮೆಂಟ್ಸ್ ಅನ್ನುತ್ತಾ ಕಾರು ಹತ್ತುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ