‘ಕಾಟೇರ’ ವಿಜಯ ಯಾತ್ರೆ ಯಾವಾಗ?; ಉತ್ತರ ಕೊಟ್ಟ ದರ್ಶನ್
ಸಿನಿಮಾ ಗೆದ್ದಾಗ ಸಾಮಾನ್ಯವಾಗಿ ತಂಡ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುತ್ತದೆ. ಈ ರೀತಿಯ ವಿಜಯ ಯಾತ್ರೆಯನ್ನು ದರ್ಶನ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಿಂದ ದರ್ಶನ್ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ ಕಲೆಕ್ಷನ್ ನೂರು ಕೋಟಿ ರೂಪಾಯಿ ಸಮೀಪಿಸಿದೆ. ಸಿನಿಮಾ ಗೆದ್ದಾಗ ಸಾಮಾನ್ಯವಾಗಿ ತಂಡ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುತ್ತದೆ. ಈ ರೀತಿಯ ವಿಜಯ ಯಾತ್ರೆಯನ್ನು ದರ್ಶನ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ದರ್ಶನ್ (Darshan) ಅವರು ನಿರ್ಮಾಪಕರತ್ತ ಬೆರಳು ಮಾಡಿ ತೋರಿಸಿದ್ದಾರೆ. ‘ಇದನ್ನು ನೀವು ನಿರ್ಮಾಪಕರಿಗೆ ಕೇಳಬೇಕು. ಇದೆಲ್ಲ ಪ್ಲ್ಯಾನ್ ಮಾಡೋದು ಅವರು’ ಎಂದಿದ್ದಾರೆ ದರ್ಶನ್. ‘ಕಾಟೇರ’ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಇದೆ. ರಾಕ್ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos