Assembly Session: ಸರ್ಕಾರೀ ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸಿದ್ದರಾಮಯ್ಯ

ಸರ್ಕಾರಿ ನೌಕರು ಮತ್ತು ಪಿಂಚಣಿದಾರರ ವೇತನ ಪರಿಷ್ಕರಣೆ ನಂತರ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ₹ 20,208 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕಾಗಿ 2024-2025 ಸಾಲಿನಲ್ಲಿ ಬಜೆಟ್ ನಲ್ಲಿ ಹಣವನ್ನು ತೆಗೆದಿರಿಸಲಾಗಿದೆ ಎಂದರು.

Assembly Session: ಸರ್ಕಾರೀ ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಕೊಡುಗೆ ಪ್ರಕಟಿಸಿದ ಸಿದ್ದರಾಮಯ್ಯ
|

Updated on: Jul 16, 2024 | 4:53 PM

ಬೆಂಗಳೂರು: ಸದನದಲ್ಲಿ ಇಂದು ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರಿಗೆ ಭರ್ಜರಿ ಉಡುಗೊರೆ ಪ್ರಕಟಿಸಿದರು. ನವೆಂಬರ್ 2022ರಲ್ಲಿ ರಚಿಸಲಾಗಿದ್ದ 7ನೇ ವೇತನಾ ಆಯೋಗವು 24-03-2024ರಂದು ವರದಿಯನ್ನು ಸಲ್ಲಿಸಿದ್ದು ಅದರಲ್ಲಿ ಮಾಡಲಾಗಿರುವ ಶಿಫಾರಸ್ಸುಗಳನ್ನು ಸರ್ಕಾರವು ಆಗಸ್ 1ರಿಂದ ಅನ್ವಯಯವಾಗುವಂತೆ ಅನುಷ್ಠಾನಗೊಳಿಸಲು ನಿನ್ನೆ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸದಸ್ಯರ ಕರತಾಡನದ ಮಧ್ಯೆ ಸಿದ್ದರಾಮಯ್ಯ ಘೋಷಣೆ ಮಾಡಿದರು. ಆಯೋಗದ ಶಿಫಾರಸ್ಸುಗಳ ಪ್ರಕಾರ ಸರ್ಕಾರೀ ನೌಕರರು ಪಿಂಚಣಿದಾರರ ಮೂಲ ವೇತನದ ಶೇಕಡ 31ರಷ್ಟು ತುಟ್ಟಿಭತ್ಯೆ, ಮತ್ತು ಶೇಕಡ 27. 50ರಷ್ಟು ಫಿಟ್ಮೆಂಟ್ ಹೆಚ್ಚಾಗಲಿದೆ ಎಂದು ಸಿಎಂ ಹೇಳಿದರು. ಸರ್ಕಾರಿ ನೌಕರರ ಕನಿಷ್ಟ ಮೂಲ ವೇತನ ₹ 17,000 ಇದ್ದಿದ್ದು ಪರಿಷ್ಕರಣೆಯ ನಂತರ ₹ 27,000 ಆಗಲಿದ್ದು ಹಾಗೆಯೇ ಗರಿಷ್ಠ ₹ 1,50,600 ಇರುವ ಮೂಲ ವೇತನ ₹ 2, 40,200 ಗಳಿಗೆ ಪರಿಷ್ಕರಣೆಗೊಳ್ಳಲಿದೆ ಎಂದು ಅವರು ಹೇಳಿದರು. ಹಾಗೆಯೇ, ₹ 8,500 ಪಿಂಚಣಿ ಪಡೆಯುವವರ ಪೆನ್ಷನ್ ₹ 13,500ಕ್ಕೆ ಹೆಚ್ಚಲಿದ್ದು ಗರಿಷ್ಠ ₹ 75,300 ಪಿಂಚಣಿ ಪಡೆಯುತ್ತಿರುವವರು ಪರಿಷ್ಕರಣೆಯ ನಂತರ ₹ 1,20,600 ಪಡೆಯಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ 2 ಪ್ರತ್ಯೇಕ ದೂರು

Follow us
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!
ವಿಐಪಿ ಖೈದಿಗಳಿಗೆ ‘ಸೇವೆ’ ಒದಗಿಸುವ ಪದ್ಧತಿ ಬಹಳ ವರ್ಷಗಳಿಂದ ನಡೆಯುತ್ತಿದೆ!
ಫುಲ್ ಜೋಶ್... 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್
ಫುಲ್ ಜೋಶ್... 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್
ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ಭಕ್ತಿಯಲ್ಲಿ ಮೈ ಮರೆತ ಜನ
ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ಭಕ್ತಿಯಲ್ಲಿ ಮೈ ಮರೆತ ಜನ
‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಟೀಕೆ
‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಟೀಕೆ
Daily Devotional: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಮಹತ್ವ ತಿಳಿಯಿರಿ
Daily Devotional: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಹಾಗೂ ಮಹತ್ವ ತಿಳಿಯಿರಿ
Nithya Bhavishya: ಕೃಷ್ಣ ಜನ್ಮಾಷ್ಟಮಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಕೃಷ್ಣ ಜನ್ಮಾಷ್ಟಮಿ ದಿನದ ರಾಶಿ ಭವಿಷ್ಯ ತಿಳಿಯಿರಿ