CM Siddaramaiah: ಮೈಸೂರು ಭಾಗದಲ್ಲಿ ಡಾ ಯತೀಂದ್ರ ತನಗಿಂತ ಹೆಚ್ಚು ಜನಪ್ರಿಯ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2023 | 5:48 PM

ತಾನು ವರುಣಾ ಕ್ಷೇತ್ರದಿಂದ ಮೂರು ಬಾರು ಬಾರಿ ಸ್ಪರ್ಧಿಸಿ ಗೆದ್ದಿದ್ದರೂ, ಯತೀಂದ್ರನಷ್ಟು ಭಾರೀ ಅಂತರದಿಂದ ಗೆದ್ದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ಮೈಸೂರು ಭಾಗದಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ (Dr Yatindra Siddaramaiah) ತಮ್ಮ ತಂದೆ ಸಿದ್ದರಾಮಯ್ಯಗಿಂತ (Siddaramaiah) ಹೆಚ್ಚು ಪ್ರಭಾವಶಾಲಿ ನಾಯಕ ಅಂತ ಇನ್ನೊಂದು ವಿಡಿಯೋದಲ್ಲಿ ನಾವು ಚರ್ಚಿಸಿದ್ದೇವೆ. ಅದನ್ನು ಇವತ್ತು ಮುಖ್ಯಮಂತ್ರಿಗಳು ಸಹ ಮನಗಂಡರು. ವರುಣಾದಲ್ಲಿ ಇಂದು ನಡೆದ ಕೃತಜ್ಞತಾ ಸಮಾವೇಶದಲ್ಲಿ (thanksgiving) ಮಾತಾಡುವಾಗ ಸಿದ್ದರಾಮಯ್ಯನವರು ಭಾಷಣದ ಆರಂಭದಲ್ಲಿ ವೇದಿಕೆಯ ಮೇಲೆ ಕೂತಿದ್ದವರ ಹೆಸರುಗಳನ್ನು ಒಂದೊಂದಾಗಿ ಹೇಳುವಾಗ, ‘ಮಾಜಿ ಶಾಸಕರಾದ ಡಾ ಯತೀಂದ್ರ ಅವರೇ’ ಅಂದ ಕೂಡಲೇ ಸಮಾವೇಶದಲ್ಲಿ ಭಾಗಿಯಾಗಿದ್ದ ಸಾವಿರಾರು ಜನರಿಂದ ಜೋರಾದ ಚಪ್ಪಾಳೆ ಮತ್ತು ಶಿಳ್ಳೆ! ಮುಂದುವರಿದು ಮಾತಾಡುವಾಗ ಸಿದ್ದರಾಮಯ್ಯ, ತಾನು ವರುಣಾ ಕ್ಷೇತ್ರದಿಂದ ಮೂರು ಬಾರು ಬಾರಿ ಸ್ಪರ್ಧಿಸಿ ಗೆದ್ದಿದ್ದರೂ, ಯತೀಂದ್ರನಷ್ಟು ಭಾರೀ ಅಂತರದಿಂದ ಗೆದ್ದಿಲ್ಲ ಎಂದರು. ಮಗನ ಜನಪ್ರಿಯತೆಯನ್ನು ಖುದ್ದು ಸಿದ್ದರಾಮಯ್ಯನವರೇ ಅಂಗೀಕರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.