ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ: ಅವರಿಗೇ ಲೋಕಸಭಾ ಟಿಕೆಟ್ ಕೊಡಿ – ಪತ್ರ ಚಳವಳಿ

ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ. ಜಾತ್ಯತೀತವಾಗಿ ಎಲ್ಲರೂ ಇಷ್ಟಪಡುವ ವ್ಯಕ್ತಿ. ಮೈಸೂರು ಜಿಲ್ಲೆಯಲ್ಲಿ ಬೇರೆ ಯಾರಿಗೇ ಟಿಕೆಟ್​ ಕೊಟ್ಟರೂ ಗೆಲ್ಲಲು ಆಗಲ್ಲ- ಅಂಚೆ ಚಳವಳಿ

ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ: ಅವರಿಗೇ ಲೋಕಸಭಾ ಟಿಕೆಟ್ ಕೊಡಿ - ಪತ್ರ ಚಳವಳಿ
ಯತೀಂದ್ರ ಸಿದ್ದರಾಮಯ್ಯಗೆ ಲೋಕಸಭಾ ಟಿಕೆಟ್ ಕೊಡಿ - ಪತ್ರ ಚಳವಳಿ
Follow us
|

Updated on:Jun 09, 2023 | 9:17 PM

ಮೈಸೂರು: ಡಾ. ಯತೀಂದ್ರ ಸಿದ್ದರಾಮಯ್ಯಗೆ (Dr Yathindra Siddaramaiah) ಮೈಸೂರು-ಕೊಡಗು ಕ್ಷೇತ್ರದ (Kodagu Mysore Parliament Constituency) ಲೋಕಸಭಾ ಟಿಕೆಟ್​ ನೀಡುವಂತೆ ಆಗ್ರಹ ಕೇಳಿಬಂದಿದೆ. ಈನ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಅಂಚೆ ಪತ್ರ ರವಾನಿಸಲಾಗಿದೆ. ಮೈಸೂರಿನ ರಾಮಸ್ವಾಮಿ ಸರ್ಕಲ್​​ ಬಳಿ ಅಭಿಮಾನಿಗಳಿಂದ ಇಂದು ಅಂಚೆ ಚಳವಳಿ ನಡೆಯಿತು. ಕಾಂಗ್ರೆಸ್ ವರಿಷ್ಠರಿಗೆ ಪತ್ರಗಳನ್ನು ಪೋಸ್ಟ್ ಮಾಡಿದ ಯತೀಂದ್ರ ಬೆಂಬಲಿಗರು ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಅಂಚೆ ಚಳವಳಿ ನಡೆಸಿದರು.

ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ. ಜಾತ್ಯತೀತವಾಗಿ ಎಲ್ಲರೂ ಇಷ್ಟಪಡುವ ವ್ಯಕ್ತಿ. ಮೈಸೂರು ಜಿಲ್ಲೆಯಲ್ಲಿ ಬೇರೆ ಯಾರಿಗೇ ಟಿಕೆಟ್​ ಕೊಟ್ಟರೂ ಗೆಲ್ಲಲು ಆಗಲ್ಲ. ಮೈಸೂರು-ಕೊಡಗು ಕ್ಷೇತ್ರಕ್ಕೆ ( Mysore Lok Sabha constituency) ಡಾ. ಯತೀಂದ್ರ ಸಿದ್ದರಾಮಯ್ಯ ಸೂಕ್ತ ವ್ಯಕ್ತಿ. ಡಾ. ಯತೀಂದ್ರ ಸರಳ ವ್ಯಕ್ತಿತ್ವದವರು ಹಾಗೂ ಯುವಕರಾಗಿದ್ದಾರೆ. ಡಾ. ಯತೀಂದ್ರಗೆ ಲೋಕಸಭಾ ಟಿಕೆಟ್​​ ನೀಡಬೇಕೆಂದು ಅಂಚೆ ಚಳವಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಮೊದಲ ಬಾರಿಗೆ ಶನಿವಾರ ತವರು ಜಿಲ್ಲೆಗೆ:

ಮುಖ್ಯಮಂತ್ರಿ ಆದ ನಂತರ ಸಿದ್ದರಾಮಯ್ಯ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಸಿದ್ದು ಸ್ವಾಗತಿಸಲು ಕೈ ಕಾರ್ಯಕರ್ತರು ಭರ್ಜರಿ ಸಿದ್ದತೆ ನಡೆಸಿದ್ದಾರೆ. ಸಿದ್ದರಾಮಯ್ಯ ಲಕ್ಕಿ ಕ್ಷೇತ್ರದಲ್ಲಿ ಅದ್ದೂರಿ ಕೃತಜ್ಞತಾ ಸಭೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಗೌರವಿಸಿ ಸನ್ಮಾನಿಸಲು ಸಿದ್ದತೆ ನಡೆಸಲಾಗಿದೆ.‌ ಒಟ್ಟಾರೆ. ಒಂದಲ್ಲ ಎರಡು ಬಾರಿ ಮುಖ್ಯಮಂತ್ರಿ ಮಾಡಿದ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದು ಮೈಸೂರು ಕೈ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ. ಇದೇ ವೇಳೆ ಡಾ. ಯತೀಂದ್ರ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಟಿಕೆಟ್​ ನೀಡುವಂತೆ ಮತ್ತೊಮ್ಮೆ ಬಲವಾದ ಆಗ್ರಹ ಕೇಳಿರುವ ಸಾಧ್ಯತೆಯಿದೆ.

ಸಿಎಂ ಸಿದ್ದರಾಮಯ್ಯ ಕೃತಜ್ಞತಾ ಸಭೆಗಾಗಿ ಬೃಹತ್ ವೇದಿಕೆ ಸಿದ್ದವಾಗುತ್ತಿದೆ. ಹೌದು ಸಿಎಂ ಆದ ನಂತರ ಸಿದ್ದರಾಮಯ್ಯ ನಾಳೆ ಶನಿವಾರ ತವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದಾರೆ. ಅದಕ್ಕಾಗಿ ಮೈಸೂರಿನ ಕೈ ಕಾರ್ಯಕರ್ತರು ಬೃಹತ್ ಸಮಾವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಕೃತಜ್ಞತಾ ಸಮಾವೇಶದ ಹೆಸರಿನಲ್ಲಿ‌ ಕಾರ್ಯಕ್ರಮ ಆಯೋಜಿಸಲಾಗಿದೆ‌. ಮೈಸೂರು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬಿಳುಗುಲಿ ಗ್ರಾಮದ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ 50 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಇನ್ನು ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಊಟ ಮಾಡಲು ಡೈನಿಂಗ್ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:14 pm, Fri, 9 June 23