CM congratulates the Speaker: ವಿಧಾನಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ ಯುಟಿ ಖಾದರ್​ರನ್ನು ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

|

Updated on: May 24, 2023 | 1:42 PM

ತಮ್ಮ ಮಂತ್ರಿಮಂಡಲದಲ್ಲಿ ಖಾದರ್ ಸಚಿವರಾಗಿ ಕೆಲಸ ಮಾಡಿದ್ದನ್ನು ಸಹ ಸಿದ್ದರಾಮಯ್ಯ ಸದನದ ಗಮನಕ್ಕೆ ತಂದರು.

ಬೆಂಗಳೂರು: 16ನೇ ವಿಧಾನ ಸಭೆಯ ಸ್ಪೀಕರ್ ಅಗಿ ಅವಿರೋಧ ಆಯ್ಕೆಯಾದ ಯುಟಿ ಖಾದರ್ (UT Khader) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸದನದ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದಿಸಿದರು. ಖಾದರ್ ಅವರು ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ ಮುಸ್ಲಿಂ ಸಮುದಾಯದ (Muslim community) ಮೊದಲ ನಾಯಕರಾಗಿದ್ದಾರೆ. ರಾಜಕಾರಣದ ಕುಟುಂಬದ ಹಿನ್ನೆಲೆಯ ಖಾದರ್ ಅವರ ತಂದೆ ಯುಟಿ ಫರೀದ್ ಸಹ ಶಾಸಕರಾಗಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು. ತಂದೆಯ ನಿಧನದ ಬಳಿಕ ಖಾದರ್ ಉಳ್ಳಾಲ ಕ್ಷೇತ್ರದಿಂದ ವಿಧಾನಸಭೆಗೆ 5 ಬಾರಿ ಅಯ್ಕೆಯಾಗಿರುವರೆಂದು ಹೇಳಿದ ಸಿದ್ದರಾಮಯ್ಯ, ತಮ್ಮ ಮಂತ್ರಿಮಂಡಲದಲ್ಲಿ ಸಚಿವರಾಗಿ ಕೆಲಸ ಮಾಡಿದ್ದನ್ನು ಸಹ ಸದನದ ಗಮನಕ್ಕೆ ತಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ