DK Suresh: ಪಕ್ಷ ಬಯಸಿದರೆ ಸಿದ್ದರಾಮಯ್ಯ ಮುಂದಿನ 10 ವರ್ಷಗಳ ಅವಧಿಗೂ ಮುಖ್ಯಮಂತ್ರಿಯಾಗಲಿ, ಬೇಡ ಅನ್ನೋರ‍್ಯಾರು? ಡಿಕೆ ಸುರೇಶ್

DK Suresh: ಪಕ್ಷ ಬಯಸಿದರೆ ಸಿದ್ದರಾಮಯ್ಯ ಮುಂದಿನ 10 ವರ್ಷಗಳ ಅವಧಿಗೂ ಮುಖ್ಯಮಂತ್ರಿಯಾಗಲಿ, ಬೇಡ ಅನ್ನೋರ‍್ಯಾರು? ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on:May 24, 2023 | 1:27 PM

ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ, ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಮತ್ತು ಬದ್ಧತೆ ಸರ್ಕಾರದ ಮೇಲಿದೆ ಎಂದು ಸುರೇಶ್ ಹೇಳಿದರು.

ಬೆಂಗಳೂರು: ಅಧಿಕಾರ ಹಂಚಿಕೆ ಬಗ್ಗೆ ಸುಖಾಸುಮ್ಮನೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದ ಸಚಿವ ಎಂಬಿ ಪಾಟೀಲ್ ಗೆ (MB Patil) ಸೂಚ್ಯವಾಗಿ ಎಚ್ಚರಿಕೆ ನೀಡಿದ್ದ ಸಂಸದ ಡಿಕೆ ಸುರೇಶ್ (DK Suresh) ಇಂದು ಅದೇ ವಿಷಯದ ಬಗ್ಗೆ ಅಳೆದು ತೂಗಿ ಮಾತಾಡಿದರು. ಪಾಟೀಲ್ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪದೇಪದೇ ಪ್ರಶ್ನೆ ಕೇಳಿದರೂ ಸಹನೆ ಕಳೆದುಕೊಳ್ಳದೆ ಮಾತಾಡಿದ ಸುರೇಶ್ ಈಗಾಗಲೇ ವಿಷಯವನ್ನು ಮಾತಾಡಿಯಾಗಿದೆ, ಅದನ್ನು ರಿಪೀಟ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಪಾಟೀಲ್ ಹೇಳಿಕೆ ಅನಗತ್ಯವಾಗಿತ್ತಾ ಎಂಬ ಪ್ರಶ್ನೆಗೆ ಅವರು, ಯಾರು ಏನು ಹೇಳುತ್ತಾರೆ ಅನ್ನೋದು ಗಣನೆಗೆ ಬರೋದಿಲ್ಲ, ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ, ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಜವಾಬ್ದಾರಿ ಮತ್ತು ಬದ್ಧತೆ ಸರ್ಕಾರದ ಮೇಲಿದೆ, ಹಾಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಮುಖ್ಯಮಂತ್ರಿ ಮತ್ತು ಅವರ ಸಚಿವ ಸಂಪುಟವನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಪಕ್ಷ ಬಯಸಿದರೆ ಎಂಬಿ ಪಾಟೀಲ್ ಮುಖ್ಯಮಂತ್ರಿಯಾಗಲಿ, ಅಥವಾ ಸಿದ್ದರಾಮಯ್ಯ (Siddaramaiah) ಮುಂದೆ 10 ವರ್ಷಗಳ ಅವಧಿಗೂ ಸಿಎಂ ಆಗಲಿ, ಯಾರು ಬೇಡ ಅನ್ನುತ್ತಾರೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 24, 2023 12:59 PM