ವಿಧಾನಸಭೆಯಲ್ಲಿ ಎದುರಿಗೆ ಸಿಕ್ಕ ಎಂ.ಬಿ. ಪಾಟೀಲ್​ಗೆ ಗುರಾಯಿಸಿ ವಾರ್ನ್ ಮಾಡಿದ ಡಿಕೆ ಸುರೇಶ್: ಏನ್ರೀ ಇದು ರೌಡಿಸಂ ಎಂದ ಶಾಸಕರು

ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂಸದ ಡಿಕೆ ಸುರೇಶ್ ನಡುವಿನ ವೈಯಕ್ತಿಕ ಕಾದಾಟ ಮತ್ತೊಂದು ಹಂತಕ್ಕೆ ಹೋಗಿದೆ. ವಿಧಾನಸಭೆಯಲ್ಲಿ ಎದುರಿಗೆ ಬಂದ ಎಂ.ಬಿ. ಪಾಟೀಲ್​ಗೆ ಡಿಕೆ ಸುರೇಶ್ ಮತ್ತೆ ವಾರ್ನ್ ಮಾಡಿದ್ದು, ಸ್ಥಳದಲ್ಲಿದ್ದ ಶಾಸಕರು ಗಾಬರಿಯಾಗಿರುವ ಪ್ರಸಂಗ ನಡೆದಿದೆ.

ವಿಧಾನಸಭೆಯಲ್ಲಿ ಎದುರಿಗೆ ಸಿಕ್ಕ ಎಂ.ಬಿ. ಪಾಟೀಲ್​ಗೆ ಗುರಾಯಿಸಿ ವಾರ್ನ್ ಮಾಡಿದ ಡಿಕೆ ಸುರೇಶ್: ಏನ್ರೀ ಇದು ರೌಡಿಸಂ ಎಂದ ಶಾಸಕರು
ಎಂಬಿ ಪಾಟೀಲ್-ಡಿಕೆ ಸುರೇಶ್
Follow us
ರಮೇಶ್ ಬಿ. ಜವಳಗೇರಾ
| Updated By: ಡಾ. ಭಾಸ್ಕರ ಹೆಗಡೆ

Updated on:May 24, 2023 | 12:49 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಬಣದ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಬದಲಾವಣೆ ಇಲ್ಲ ಎಂದು ವರಿಷ್ಠರೇ ತಿಳಿಸಿದ್ದಾರೆ ಎಂದಿರುವ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿಕೆ ಕಾಂಗ್ರೆಸ್​​ನಲ್ಲಿ ದೊಡ್ಡ ಕಂಪನ ಸೃಷ್ಟಿಸಿದೆ. ಅಲ್ಲದೇ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ನಿನ್ನೆಯೇ ಡಿಕೆ ಸುರೇಶ್ (DK Suresh) ಮಾಧ್ಯಮಗಳ ಮೂಲಕ ಎಂ.ಬಿ ಪಾಟೀಲ್​ಗೆ ಖಡಕ್ ಎಚ್ಚರಿಕೆ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಡಿಕೆ ಸುರೇಶ್ ಇಂದು ಎದುರಿಗೆ ಸಿಕ್ಕ ಎಂ.ಬಿ ಪಾಟೀಲ್​ಗೆ ಮತ್ತೆ ನೇರವಾಗಿ ವಾರ್ನಿಂಗ್ ಮಾಡಿರುವ ಘಟನೆ ನಡೆದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ನಡೆದಿದ್ದು, ಅಲ್ಲೇ ಇದ್ದ ಶಾಸಕರು, ಗನ್​ಮ್ಯಾನ್​, ಶಾಸಕರ ಆಪ್ತಕಾರ್ಯದರ್ಶಿಗಳು ಗಾಬರಿಯಾಗಿದ್ದಾರೆ.

ಹೌದು..ಇಂದು(ಮೇ 24) ವಿಧಾನಸೌಧದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಎಂ.ಬಿ ಪಾಟೀಲ್ ಮುಖಾಮುಖಿಯಾಗಿದ್ದು, ಈ ವೇಳೆ ಡಿಕೆ ಸುರೇಶ್​ ಅವರು ಎಂ.ಬಿ ಪಾಟೀಲ್​ಗೆ ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದಾರೆ. ಬಳಿಕ ಬನ್ನಿ ಚೇಂಬರ್​ಗೆ ಹೋಗೋಣ ಎಂದು ಎಂ.ಬಿ ಪಾಟೀಲ್, ಡಿಕೆ ಸುರೇಶ್ ಕೈ ಹಿಡಿದು ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದ್ರೆ, ಸುರೇಶ್ ಮತ್ತೆ ಗುರಾಯಿಸಿದ್ದಾರೆ. ನಂತರ ಎಂ.ಬಿ ಪಾಟೀಲ್ ಕೈಬಿಟ್ಟು ಆಮೇಲೆ ಮಾತನಾಡುವೆ ಎಂದು ಅಲ್ಲಿಂದ ಮೌನವಾಗಿ ತೆರಳಿದರು.

ಇದನ್ನೂ ಓದಿ: ಅಧಿಕಾರ ಹಂಚಿಕೆ ಇಲ್ಲ, ಸಿದ್ದರಾಮಯ್ಯ ಪೂರ್ಣವಧಿ ಸಿಎಂ ಆಗಲಿದ್ದಾರೆ; ಎಂ.ಬಿ ಪಾಟೀಲ್

ಇನ್ನು ಡಿಕೆ ಸುರೇಶ್ ಅವರ ವರ್ತನೆಗೆ ಕೆಲ ಶಾಸಕರು ಬೇಸರ ವ್ಯಕ್ತಪಡಿಸಿದ್ದು, ಏನ್ರಿ ಇದು ಈ ತರ ರೌಡಿಸಂ. ರೌಡಿ ತರಹ ವಾರ್ನಿಂಗ್ ಕೊಡ್ತಾರಲ್ಲ ಎಂದು ಸುರೇಶ್​ ಮಾತಿಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ ಡಿಕೆ ಸುರೇಶ್ ವಾರ್ನಿಂಗ್​ಗೆ ಸ್ಥಳದಲ್ಲೇ ಇದ್ದ ಗನ್​ಮ್ಯಾನ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿಗಳು ಗಾಬರಿಯಾದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಎನ್ನುವ ಎಂಬಿ ಪಾಟೀಲ್​ ಹೇಳಿಕೆಗೆ ಖಡಕ್​ ಎಚ್ಚರಿಕೆ ನೀಡಿದ ಡಿಕೆ ಸುರೇಶ್​

ಎಂ.ಬಿ ಪಾಟೀಲ್​ ಮಾತಿಗೆ ನಿನ್ನೆಯೇ ಸಂಸದ ಡಿ.ಕೆ ಸುರೇಶ್​ ಅಂತೂ ಫುಲ್​ ಗರಂ ಆಗಿದ್ದರು. ಅವರಿಗೆ ನಾನು ತೀಕ್ಷ್ಣವಾಗಿ ಹೇಳಬಲ್ಲೇ ಆದ್ರೆ ಇದೆಲ್ಲಾ ಬೇಡ ಎಂದು ಹೇಳಿ ಕೆಂಡವಾಗಿದ್ದರು. ಇದೀಗ ಮತ್ತೆ ಎದುರಿಗೆ ಬಂದಾಗ ಬಹಿರಂಗವಾಗಿಯೇ ವಾರ್ನಿಂಗ್ ಮಾಡಿದ್ದು, ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದರೆ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಬಣ ಕಾದಾಟ ಮತ್ತಷ್ಟು ತಾರಕಕ್ಕೇರುವ ಲಕ್ಷಣಗಳು ಕಂಡುಬರುತ್ತಿವೆ.

ಒಂದು ರೀತಿ ಬೂದಿ ಮುಚ್ಚಿದ ಕೆಂಡದ ಮೇಲೆ ತುಪ್ಪ ಸುರಿದಂತೆ ಆಗಿದ್ದು, ಇದೀಗ ಎಂ.ಬಿ ಪಾಟೀಲ್​​ ಮತ್ತು ಸಂಸದ ಡಿಕೆ ಸುರೇಶ್ ನಡುವಿನ ಕಾದಾಟ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:43 am, Wed, 24 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್