AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ 5 ವರ್ಷ ಸಿಎಂ ಎನ್ನುವ ಎಂಬಿ ಪಾಟೀಲ್​ ಹೇಳಿಕೆಗೆ ಖಡಕ್​ ಎಚ್ಚರಿಕೆ ನೀಡಿದ ಡಿಕೆ ಸುರೇಶ್​

ಸಿದ್ದರಾಮಯ್ಯನವೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿಕೆ ನೀಡಿರುವ ಸಚಿವ ಎಂಬಿ ಪಾಟೀಲ್​ಗೆ ಡಿಕೆ ಸುರೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ 5 ವರ್ಷ ಸಿಎಂ ಎನ್ನುವ ಎಂಬಿ ಪಾಟೀಲ್​ ಹೇಳಿಕೆಗೆ ಖಡಕ್​ ಎಚ್ಚರಿಕೆ ನೀಡಿದ ಡಿಕೆ ಸುರೇಶ್​
ಡಿಕೆ ಸುರೇಶ್-ಎಂಬಿ ಪಾಟೀಲ್
ರಮೇಶ್ ಬಿ. ಜವಳಗೇರಾ
|

Updated on:May 23, 2023 | 2:53 PM

Share

ಬೆಂಗಳೂರು: ಐದು ವರ್ಷ ಸಿದ್ದರಾಮಯ್ಯರೇ (Siddaramaiah) ಸಿಎಂ, ಡಿಕೆ ಶಿವಕುಮಾರ್ (DK Shivakumar)​ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ. ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್ (MB Patil) ಆಡಿದ ಈ ಮಾತುಗಳು ಕಾಂಗ್ರೆಸ್​ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಬಣದ ಶಾಸಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಎಂಬಿ ಪಾಟೀಲ್ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಡಿಕೆ ಶಿವಕುಮಾರ್ ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್​ಗೆ ನೇರವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇಂದು(ಮೇ 23) ಮಾಧ್ಯಮಗಳ ಜೊತೆ ಮಾಡಿದ ಡಿಕೆ ಸುರೇಶ್ (DK Suresh), ಇದೆಲ್ಲ ಬೇಡ ಅಂತ ಸಚಿವ ಎಂ.ಬಿ.ಪಾಟೀಲ್​ಗೆ ಹೇಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆಂತರಿಕವಾಗಿದ್ದ ದೆಹಲಿ ದಂಗಲ್ ಬಹಿರಂಗ: ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ ಎಂಬಿ ಪಾಟೀಲ್​ ಹೇಳಿಕೆ, ಕೈ ಮನೆಯೊಳಗೆ ಬೂದಿ ಮುಚ್ಚಿದ ಕೆಂಡ

ಎಂ.ಬಿ.ಪಾಟೀಲ್​ಗೆ ಹೇಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಅಂದ್ರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಳಿ ಮಾತನಾಡಿ. ಎಂ.ಬಿ.ಪಾಟೀಲ್​ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ನೀಡಲು ಬರುತ್ತೆ. ಆದರೆ ಈಗಲೇ ಅದೆಲ್ಲ ಬೇಡ ಎಂದರು. ಈ ಮೂಲಕ ಬಹಿರಂಗವಅಗಿಯೇ ಎಂಬಿ ಪಾಟೀಲ್​ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದರು.

ಇನ್ನು ಈ ಬಗ್ಗೆ ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ, ಡಿಕೆ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರೆ. ಬಹುಮತ ಬರಲು ಡಿ.ಕೆ.ಶಿವಕುಮಾರ್ ಪಾತ್ರ ಕೂಡ ದೊಡ್ಡದಿದೆ. ಹೀಗಾಗಿ ಡಿಕೆ ಶಿವಕುಮಾರ್​ಗೆ ಸಿಎಂ ಅವಕಾಶ ಕೊಡಿ ಎಂದು ಈ ಹಿಂದೆ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ಒಂದು ಸಮುದ್ರ ಇದ್ದಂತೆ. ಮುಂದೆ ಡಿಕೆ ಶಿವಕುಮಾರ್ ಸಿಎಂ ಆಗಲು ಹೈಕಮಾಂಡ್​ ಅವಕಾಶ ಮಾಡಿಕೊಡುತ್ತೆಂಬ ವಿಶ್ವಾಸ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಎಂಬಿ ಪಾಟೀಲ್​ಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಅಧಿಕಾರ ಹಂಚಿಕೆ ಇಲ್ಲ, ಸಿದ್ದರಾಮಯ್ಯ ಪೂರ್ಣವಧಿ ಸಿಎಂ ಆಗಲಿದ್ದಾರೆ; ಎಂಬಿ ಪಾಟೀಲ್

ಎಂಬಿ ಪಾಟೀಲ್ ಹೇಳಿಕೆ ಚರ್ಚೆಗೆ ಗ್ರಾಸ

ಐದು ವರ್ಷ ಸಿದ್ದರಾಮಯ್ಯರೇ ಸಿಎಂ, ಡಿಕೆಶಿ ಡಿಸಿಎಂ. ಲೋಕಸಭಾ ಚುನಾವಣೆ ಬಳಿಕ ಸಿಎಂ ಬದಲಾವಣೆ ಎನ್ನುವ ಮಾತೇ ಇಲ್ಲ ಎನ್ನುವ ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಎಂ.ಬಿ ಪಾಟೀಲ್ ಆಡಿದ ಈ ಮಾತುಗಳು ಡಿಕೆ ಶಿವಕುಮಾರ್​ ಪಾಳಯದಲ್ಲಿ ಬೆಂಕಿ ಬೀಳುವಂತೆ ಮಾಡಿದೆ. ಸೋನಿಯಾ ಗಾಂಧಿ ಮಾತಿಗೆ ಕಟ್ಟುಬಿದ್ದು ಡಿಸಿಎಂ ಪಟ್ಟಕ್ಕೆ ತೃಪ್ತಿಪಟ್ಟಿದ್ದ ಕನಕಪುರ ಬಂಡೆ ಡಿಕೆ ಶಿವಕುಮಾರ್ ಸಿಎಂ ಆಸೆ ಕಮರಿ ಹೋಯ್ತಾ? ಡಿಕೆಶಿಗೆ ಡೆಪ್ಯುಟಿಯೇ ಖಾಯಂ ಎಂಬ ಅನುಮಾನ ಈಗ ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

ದೆಹಲಿಯಲ್ಲಿ ಏನ್ ಮಾತುಕತೆ ಆಯ್ತು ಸಾರ್? ಅಧಿಕಾರ ಹಂಚಿಕೆ ಹೇಗೆ ಸರ್? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಐ ಕಾಂಟ್​ ಡಿಸ್​​ಕ್ಲೋಸ್​ ಇಟ್ ಅಂತಿದ್ದ ಡಿಕೆ ಶಿವಕುಮಾರ್, ಎಷ್ಟೇ ಬಲವಂತ ಮಾಡಿದರೂ ಬಾಯ್ಬಿಟ್ಟಿರಲಿಲ್ಲ. ಈಗ ಸುತ್ತೂರಿನಲ್ಲಿ ಎಂಬಿ ಪಾಟೀಲ್​ ಸಿಡಿಸಿದ ಹೊಸ ಬಾಂಬ್​ ಕೈ ಪಾಳಯವನ್ನೇ ನಡುಗಿಸಿದೆ. ಇನ್ನು 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದು ಎಂಬಿ ಪಾಟೀಲ್ ಬಾಂಬ್​ ಸಿಡಿಸುತ್ತಿದ್ದಂತೆ ಇತ್ತ ಡಿಕೆ ಶಿವಕುಮಾರ್ ಕಣ್ಣು ಕೆಂಪಾಗಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನು ಅಳೆದು ತೂಗಿ ಸಂಪುಟ ರಚನೆಗೆ ಸರ್ಕಸ್ ಮಾಡುತ್ತಿರುವ ಹೈಕಮಾಂಡ್​ಗೂ ಹೊಸ ತಲೆಬಿಸಿ ಶುರುವಾಗಿದೆ.

Published On - 2:37 pm, Tue, 23 May 23