Dy CM congratulates UT Khader; ಸಭಾಧ್ಯಕ್ಷರಾಗಿ ರಮೇಶ್ ಕುಮಾರ್ ನಿರ್ವಹಿಸಿದ ಕಾರ್ಯ ಅಭಿನಂದನೀಯ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
ತಮ್ಮ ಅಭಿನಂದನಾ ಭಾಷಣದಲ್ಲಿ ಖಾದರ್ ಅವರ ತಂದೆ ಯುಟಿ ಫರೀದ್ ಜೊತೆ ಶಾಸಕನಾಗಿ ಕೆಲಸ ಮಾಡಿದ್ದನ್ನು ಶಿವಕುಮಾರ್ ಸ್ಮರಿಸಿದರು.
ಬೆಂಗಳೂರು: ನೂತನ ವಿಧಾನಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯುಟಿ ಖಾದರ್ ನಿಸ್ಸಂದೇಹವಾಗಿ (UT Khader) ಅಜಾತಶತ್ರು. ವಿರೋಧ ಪಕ್ಷದ ನಾಯಕರು ಸಹ ಅವರ ಬಗ್ಗೆ ಅದ್ಭುತವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಅಭಿನಂದನಾ ಭಾಷಣದಲ್ಲಿ ಖಾದರ್ ಅವರ ತಂದೆ ಯುಟಿ ಫರೀದ್ ಜೊತೆ ಶಾಸಕನಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದರು. ವಿಧಾನ ಸಭೆ ಅಧ್ಯಕ್ಷನ ಸ್ಥಾನದ ಗೌರವ ಮತ್ತು ಹಿರಿಮೆ ಬಗ್ಗೆ ಮಾತಾಡಿದ ಶಿವಕುಮಾರ್ ಹಿಂದೆ ಆ ಸ್ಥಾನದಲ್ಲಿ ಕುಳಿತಿದ್ದ ಬಂಟ್ವಾಳ ವೈಕುಂಠ ಬಾಳಿಗಾ, ಎಸ್ ಎಂ ಕೃಷ್ಣ, ನಾಗರತ್ನಮ್ಮ, ರಮೇಶ್ ಕುಮಾರ್ (Ramesh Kumar) ಮೊದಲಾದವರು ಸಲ್ಲಿಸಿದ ಉತ್ಕೃಷ್ಟ ಸೇವೆಯನ್ನು ಸದನಕ್ಕೆ ತಿಳಿಸಿದರು. ರಮೇಶ್ ಕುಮಾರ್ ನಿರ್ವಹಿಸಿದ ಕಾರ್ಯವನ್ನು ವಿಶೇಷವಾಗಿ ಶ್ಲಾಘಿಸಿದ ಉಪ ಮುಖ್ಯಮಂತ್ರಿಗಳು, ಕಿರಿ ವಯಸ್ಸಿನ ಶಾಸಕರು ಸದನದಲ್ಲಿ ಮಾತಾಡುವಂತೆ ಅವರು ಪ್ರೇರೇಪಿಸುತ್ತಿದ್ದಿದ್ದು ಅನುಕರಣೀಯ ಮತ್ತು ಅಭಿನಂದನಾರ್ಹ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ