ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಟ್ವೀಟ್ ಮೂಲಕ ಸ್ಪಷ್ಟನೆ

HD Kumaraswamy: ಕುಮಾರಸ್ವಾಮಿ ಪ್ರವಾಸ ವೇಳೆ ಮಾಸ್ತೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವನ್ನು ಸರಿಪಡಿಸುವಂತೆ ಕುಮಾರಸ್ವಾಮಿ ಅವರ ಎದುರು ಪ್ರತಿಭಟನೆ ಮಾಡಿ, ಮನವಿ ಮಾಡಿದ್ದರು. ಈ ವೇಳೆ ಮಕ್ಕಳೊಂದಿಗೆ ತೆರಳಿ ಶಾಲಾ ಕಟ್ಟಡ ವೀಕ್ಷಿಸಿದ್ದ ಹೆಚ್. ಡಿ. ಕುಮಾರಸ್ವಾಮಿ ಕೋಪದಿಂದ ಕಾರ್ ಹತ್ತುವ ವೇಳೆ...

ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ, ಟ್ವೀಟ್ ಮೂಲಕ ಸ್ಪಷ್ಟನೆ
ರಮೇಶ್ ಕುಮಾರ್ ಅವರನ್ನು ಸೂ. ಮಗ ಎಂದು ಸಂಬೋಧಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ
TV9kannada Web Team

| Edited By: sadhu srinath

Nov 23, 2022 | 12:51 PM


ಕೋಲಾರ:  ಕಳೆದ ಐದು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಜೆಡಿಎಸ್​ ಪಕ್ಷದ ಪಂಚರತ್ನ ರಥಯಾತ್ರೆ ಮೂಲಕ ಕೋಲಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದರು. ನವೆಂಬರ್​-22 ರಂದು ಕುಮಾರಸ್ವಾಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಪ್ರವಾಸ ನಡೆಯುತ್ತಿತ್ತು, ಈ ವೇಳೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮಕ್ಕೆ ರಥಯಾತ್ರೆ ಬರುತ್ತಿದ್ದ ವೇಳೆ ನೂರಾರು ಶಾಲಾ ಮಕ್ಕಳು ಕುಮಾರಸ್ವಾಮಿ ರಥಯಾತ್ರೆ ಬಳಿ ಬಂದು ಪ್ರತಿಭಟನೆ ಮಾಡಿದರು.

ಆಗ ರಥಯಾತ್ರೆ ಬಿಟ್ಟು ಕೆಳಗಿಳಿದು ಬಂದ ಕುಮಾರಸ್ವಾಮಿ ಪುಟ್ಟ ಮಕ್ಕಳ ಸಮಸ್ಯೆಯನ್ನು ಆಲಿಸಿದರು. ಮೂರು ನಾಲ್ಕು ವರ್ಷಗಳಿಂದ ಸರ್ಕಾರಿ ಶಾಲೆ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳಿಗೆ ಪಾಠ ಕೇಳಲು ಕಟ್ಟಡವಿಲ್ಲದೆ ಮಕ್ಕಳು ಅಶ್ವಥಕಟ್ಟೆ, ಹಾಲಿನ ಡೈರಿ, ದೇವಸ್ಥಾನ ಹೀಗೆ ಎಲ್ಲೆಂದರಲ್ಲಿ ಕುಳಿತು ಪಾಠ ಕೇಳುವ ಸ್ಥಿತಿಯನ್ನು ಆಲಿಸಿ ಬೇಸರ ವ್ಯಕ್ತಪಡಿಸಿದರು. ಇನ್ನು ಸ್ವತ: ಕುಮಾರಸ್ವಾಮಿ ಮಕ್ಕಳ ಜೊತೆಗೆ ತೆರಳಿ ಶಾಲಾ ಕಟ್ಟಡವನ್ನು ವೀಕ್ಷಣೆ ಮಾಡಿ ಆದಷ್ಟು ಬೇಗ ಶಾಲಾ ಕಟ್ಟಡ ಸರಿಪಡಿಸಿಕೊಡುವ ಭರವಸೆ ಕೊಟ್ಟು ವಾಪಸ್ಸಾಗುತ್ತಿದ್ದರು.

ಈ ವೇಳೆ ಕಾರ್ ಹತ್ತುವ ವೇಳೆಯಲ್ಲಿ ಕುಮಾರಸ್ವಾಮಿ ಆಕ್ರೋಶಗೊಂಡವರಂತೆ… ಶ್ರೀನಿವಾಸಪುರದ ಹಾಲಿ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ (Ramesh Kumar) ​ ಅವರ ಬಗ್ಗೆ ಮಾತನಾಡುತ್ತಾ… ಅಷ್ಟೊಂದು ಭಾಷಣ ಮಾಡ್ತಾನೆ ಸೂ. ಮಗ. ಇದು ಸ್ಕೂಲ್​ ಕಥೆ, ಮಕ್ಕಳು ಕೂಡಾ ಅದೇ ಹೇಳ್ತಿದ್ದಾರೆ ಎಂದು ತಮ್ಮ ಕಾರ್​ನಲ್ಲಿ ಕುಳಿತಿದ್ದ ನಿಖಿಲ್​ ಕುಮಾರಸ್ವಾಮಿ ಹಾಗೂ ಇತರರಿಗೆ ಹೇಳುತ್ತಾರೆ. ಈ ವಿಡಿಯೋವನ್ನು ಅಲ್ಲಿದ್ದವರು ರೆಕಾರ್ಡ್​ ಮಾಡಿ ವಿಡಿಯೋವನ್ನು ವೈರಲ್​ ಮಾಡಿದ್ದಾರೆ.

ಇನ್ನು ಈ ವೈರಲ್​ ಸುದ್ದಿ ಟಿವಿ9 ನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕುಮಾರಸ್ವಾಮಿ ಅವರು ಕೂಡಲೇ ತಮ್ಮ ಟ್ವಿಟರ್ ಮೂಲಕ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಹೆಚ್​.ಡಿ.ಕೆ ಟ್ವೀಟ್​ ಮಾಡಿದ್ದಾರೆ.

ಜೊತೆಗೆ ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಕುಳಿತು ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು. ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ ಎಂದು ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸ್ವಷ್ಟನೆ ನೀಡಿದ್ದಾರೆ.

ಟ್ವಿಟರ್​ ಮೂಲಕ ವಿಷಾದ ವ್ಯಕ್ತಪಡಿಸಿದ ಹೆಚ್.​ಡಿ.ಕುಮಾರಸ್ವಾಮಿ:

ರಮೇಶ್ ಕುಮಾರ್ ಬೆಂಬಲಿಗರ ಆಕ್ರೋಶ:

ಇನ್ನು ಕುಮಾರಸ್ವಾಮಿ ಅವರ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ರಮೇಶ್​ ಕುಮಾರ್​ ಬೆಂಬಲಿಗರು ಹಾಗೂ ಅವರ ಅಭಿಮಾನಿಗಳು, ಕ್ಷೇತ್ರದ ಮುಖಂಡರು ಕುಮಾರಸ್ವಾಮಿಯವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದು, ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಕೋಲಾರದ ಪುರಸಭೆ ಎದುರಿನ ಸರ್ಕಲ್​ನಲ್ಲಿ ಪ್ರತಿಭಟನೆ ಮಾಡುವುದಾಗಿ ರಮೇಶ್​ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿದ್ದು, ನಾಳೆ ಅಂದರೆ ಗುರುವಾರ ಬೆಳಿಗ್ಗೆ ಕುಮಾರಸ್ವಾಮಿ ವಿರುದ್ದ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. (ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ)

ಇದನ್ನೂ ಓದಿ:
ನ. 27 ರಂದು ಪ್ರಲ್ಹಾದ ಜೋಶಿ ಜನ್ಮದಿನ -ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್, ಸಂಭ್ರಮಾಚರಣೆ ಬೇಡ ಎಂದು ಜೋಶಿ ಮನವಿ

ಇದನ್ನೂ ಓದಿ:
ನಿಮ್ಮ ಆಧಾರ್ ಕಾರ್ಡ್ ಭಯೋತ್ಪಾದಕರಿಗೆ ಸಿಗದಿರಲಿ: ಮಂಗಳೂರು ಸ್ಫೋಟದಿಂದ ಪಾಠ ಕಲಿಯಿರಿ ಎಂದ ಎಡಿಜಿಪಿ ಅಲೋಕ್​ಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada