Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಆಧಾರ್ ಕಾರ್ಡ್ ಭಯೋತ್ಪಾದಕರಿಗೆ ಸಿಗದಿರಲಿ: ಮಂಗಳೂರು ಸ್ಫೋಟದಿಂದ ಪಾಠ ಕಲಿಯಿರಿ ಎಂದ ಎಡಿಜಿಪಿ ಅಲೋಕ್​ಕುಮಾರ್

ಆಧಾರ್ ಕಾರ್ಡ್​ ಕಳೆದುಕೊಂಡವರು UIDAI ವೆಬ್​ಸೈಟ್​ನಲ್ಲಿ ಲಭ್ಯವಿರುವ ಲಾಕ್​ ಮತ್ತು ಅನ್​ಲಾಕ್ ಮಾಡುವ ಆಯ್ಕೆಯನ್ನು ಬಳಸಿಕೊಳ್ಳಬೇಕು ಎಡಿಜಿಪಿ ಅಲೋಕ್ ಕುಮಾರ್ ಸಲಹೆ ಮಾಡಿದ್ದಾರೆ. ಈ ಪ್ರಕ್ರಿಯೆ ನಿರ್ವಹಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

ನಿಮ್ಮ ಆಧಾರ್ ಕಾರ್ಡ್ ಭಯೋತ್ಪಾದಕರಿಗೆ ಸಿಗದಿರಲಿ: ಮಂಗಳೂರು ಸ್ಫೋಟದಿಂದ ಪಾಠ ಕಲಿಯಿರಿ ಎಂದ ಎಡಿಜಿಪಿ ಅಲೋಕ್​ಕುಮಾರ್
ಅಲೋಕ್​ಕುಮಾರ್ (ಎಡಚಿತ್ರ) ಮತ್ತು ತಿರುಚಿತ ಆಧಾರ್ ಕಾರ್ಡ್ (ಬಲಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 23, 2022 | 11:52 AM

ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಒಂದು ವೇಳೆ ನೀವು ಆಧಾರ್ ಕಾರ್ಡ್ ಕಳೆದುಕೊಂಡರೆ ಎಚ್ಚರಿಕೆ ವಹಿಸಿ. ಆಧಾರ್ ಸಂಖ್ಯೆ ನೀಡುವ ವಿಶಿಷ್ಟ ಗುರುತು ಪ್ರಾಧಿಕಾರ (Unique Identification Authority of India – UIDAI) ವೆಬ್​ಸೈಟ್​ನಲ್ಲಿ ಲಭ್ಯವಿರುವ ಲಾಕ್​ ಮತ್ತು ಅನ್​ಲಾಕ್ ಮಾಡುವ ಆಯ್ಕೆಯನ್ನು ಬಳಸಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ. ಮನೆಗಳನ್ನು ಬಾಡಿಗೆಗೆ ಕೊಡುವಾಗಲೂ ಬಾಡಿಗೆಗೆ ಬರುವವ ವಿವರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮನೆಯ ಅಕ್ಕಪಕ್ಕ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರಬೇಕು ಎಂದು ಅವರು ಟ್ವೀಟ್ ಮೂಲಕ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಆಧಾರ್ ವಿವರ ಲಾಕ್-ಅನ್​ಲಾಕ್ ಮಾಡುವುದು ಹೇಗೆ?

ವಿಶಿಷ್ಟ ಗುರುತು ಪ್ರಾಧಿಕಾರದ UIDAI ವೆಬ್​ಸೈಟ್​ನಲ್ಲಿ ಅಗತ್ಯ ವಿವರಗಳನ್ನು ನಮೂದಿಸಿ, ನಿಮ್ಮ ಗುರುತು ದೃಢೀಕರಿಸಿದ ನಂತರ ನಿಮ್ಮ ಆಧಾರ್ ವಿವರಗಳನ್ನು ಲಾಕ್ ಮಾಡಲು ಅವಕಾಶವಿದೆ. ಹೀಗೆ ಆಧಾರ್ ದತ್ತಾಂಶ ಲಾಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯಾರೂ ಯಾವುದೇ ಮಾಹಿತಿಯನ್ನು ದೃಢೀಕರಿಸಲು ಆಗುವುದಿಲ್ಲ. ಅಂದರೆ ಸಿಮ್ ಪಡೆಯುವುದು, ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿದಂತೆ ದುಷ್ಕರ್ಮಿಗಳು ಮೋಸ ಮಾಡುವ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಒಮ್ಮೆ ಪ್ರೊಫೈಲ್ ಲಾಕ್ ಮಾಡಿದರೆ ಅದು ಅನ್​ಲಾಕ್ ಆಗುವವರೆಗೆ ನೀವೂ ಸಹ ಆಧಾರ್ ವಿವರ ಬಳಸಿ ಯಾವುದೇ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ಆಗುವುದಿಲ್ಲ ಎಂಬ ಅಂಶವನ್ನೂ ಸಾರ್ವಜನಿಕರು ಗಮನದಲ್ಲಿ ಇರಿಸಿಕೊಳ್ಳಬೇಕಿದೆ.

ಆಧಾರ್ ಪ್ರೊಫೈಲ್ ಲಾಕ್ ಮಾಡಬೇಕು ಎಂದಿದ್ದರೆ ಮೊದಲು 16 ಅಂಕೆಗಳ ವರ್ಚುವಲ್ ಐಡಿ ನಂಬರ್ ಜನರೇಟ್ ಮಾಡಿಕೊಳ್ಳಿ. ಇದಕ್ಕಾಗಿ ಎಸ್​ಎಂಎಸ್ ಅಥವಾ UIDAI ವೆಬ್​ಸೈಟ್​ ಬಳಸಬಹುದು. https://resident.uidai.gov.in/bio-lock ಲಿಂಕ್ ಮೂಲಕ ನೇರವಾಗಿ ಪ್ರೊಫೈಲ್ ಲಾಕ್ ಸೆಕ್ಷನ್​ಗೆ ಹೋಗಬಹುದು. ಅಥವಾ UIDAI ವೆಬ್​ಸೈಟ್​ನಲ್ಲಿರುವ ‘My Aadhaar’ ಟ್ಯಾಬ್ ಕ್ಲಿಕ್ ಮಾಡಿ. ನಂತರ ‘Aadhaar Services’ ವಿಭಾಗದಲ್ಲಿರುವ ‘Aadhaar lock/unlock’ ವಿಭಾಗಕ್ಕೆ ಹೋಗಿ. ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್​ಗೆ ಬರುವ ಒಟಿಪಿ ನಮೂದಿಸಿ. ನಂತರ ಸ್ಕ್ರೀನ್​ ಮೇಲೆ ಇರುವ ‘Enable’ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಹಂತದ ನಂತರ ನಿಮ್ಮ ಬಯೊಮೆಟ್ರಿಕ್ ವಿವರಗಳು ಲಾಕ್ ಆಗುತ್ತವೆ.

ಒಂದು ವೇಳೆ ನಿಮ್ಮ ಬಯೊಮೆಟ್ರಿಕ್ ವಿವರಗಳನ್ನು ಅನ್​ಲಾಕ್ ಮಾಡಬೇಕು ಎಂಬ ಪರಿಸ್ಥಿತಿ ಬಂದರೆ ಮೊದಲೇ ಪಡೆದುಕೊಂಡಿದ್ದ ವರ್ಚುವಲ್ ಐಡಿ ನಮೂದಿಸಿ. ಒಟಿಪಿ ಎಂಟರ್ ಮಾಡಿ. ನೀವು ಒಟಿಪಿ ಎಂಟರ್ ಮಾಡಿದ ನಂತರ ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳು ಅನ್​ಲಾಕ್ ಆಗುತ್ತವೆ.

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ