Crime News: ಮತ್ತೆ ಬೆಚ್ಚಿಬಿದ್ದ ದೆಹಲಿ, ಡ್ರಗ್ಸ್ ಸೇವಿಸಿ ತನ್ನ ಮನೆಯ 4 ಮಂದಿಯನ್ನು ಕೊಂದ ಯುವಕ
ಮಾದಕ ವ್ಯಸನ ಸೇವನೆ ಮಾಡಿದ ಯುವಕನೊಬ್ಬ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ದೆಹಲಿಯನ್ನು ಮತ್ತೆ ಬೆಚ್ಚಿಬೀಳಿಸಿದೆ. 25 ವರ್ಷದ ಕೇಶವ್ ತನ್ನ ಪೋಷಕರೊಂದಿಗೆ ಜಗಳ ಮಾಡಿದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ದೆಹಲಿ: ಮಾದಕ ವ್ಯಸನ ಸೇವನೆ ಮಾಡಿದ ಯುವಕನೊಬ್ಬ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಘಟನೆ ದೆಹಲಿಯನ್ನು ಮತ್ತೆ ಬೆಚ್ಚಿಬೀಳಿಸಿದೆ. 25 ವರ್ಷದ ಕೇಶವ್ ತನ್ನ ಪೋಷಕರೊಂದಿಗೆ ಜಗಳ ಮಾಡಿದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನೈಋತ್ಯ ದೆಹಲಿಯ ಪಾಲಮ್‌ನ ಮನೆಯಲ್ಲಿ ನಿನ್ನೆ ರಾತ್ರಿ ಮೃತದೇಹಗಳು ಪತ್ತೆಯಾಗಿದೆ, ಆರೋಪಿ ಕೇಶವ್ನ್ನು ಬಂಧಿಸಲಾಗಿದೆ, ಮನೆ ಪೂರ್ತಿ ರಕ್ತದಿಂದ ಕೂಡಿತ್ತು. ಕೇಶವ್ ತೀಕ್ಷ್ಣವಾದ ವಸ್ತುವನ್ನು ಬಳಸಿ ಅವರ ಕತ್ತು ಸೀಳಿದ್ದಾನೆ ಮತ್ತು ಅನೇಕ ಬಾರಿ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಶವ್ ಅವರ ಅಜ್ಜಿ ದೀವಾನಾ ದೇವಿ (75), ತಂದೆ ದಿನೇಶ್ (50), ತಾಯಿ ದರ್ಶನಾ ಮತ್ತು ಸಹೋದರಿ ಊರ್ವಶಿ (18) ರಕ್ತಸಿಕ್ತ ಶವಗಳು ಪ್ರತ್ಯೇಕ ಕೊಠಡಿಗಳಲ್ಲಿ ಪತ್ತೆಯಾಗಿವೆ. ಆದರೆ ಆತ ಹೆತ್ತವರ ಶವಗಳು ಸ್ನಾನಗೃಹದಲ್ಲಿ ಮತ್ತು ಅವರ ಸಹೋದರಿ ಮತ್ತು ಅಜ್ಜಿಯ ಮೃತದೇಹಗಳು ಇತರ ಕೊಠಡಿಗಳಲ್ಲಿ ಕಂಡುಬಂದಿವೆ. ಪೊಲೀಸರು ತಿಳಿಸಿರುವಂತೆ ಇವರು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಇನ್ ಸ್ಟಾಗ್ರಾಂನಲ್ಲಿ ಖಾಸಗಿ ಫೋಟೋ ಹರಿಬಿಟ್ಟವರ ವಿರುದ್ಧ ನೊಂದ ಯುವತಿಯಿಂದ ದೂರು ದಾಖಲು
ಆರೋಪಿ ಕೇಶವ್ ಒಂದು ತಿಂಗಳ ಹಿಂದೆ ದೀಪಾವಳಿ ಸಮಯದಂದು ಗುರ್ಗಾಂವ್‌ನಲ್ಲಿ ಕೆಲಸ ಬಿಟ್ಟು ಮನೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡುವಾಗ ಆತ ಡ್ರಗ್ಸ್ ನ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ
ರಾತ್ರಿ 10.30ರ ಸುಮಾರಿಗೆ ಮನೆಯಿಂದ ಕಿರುಚಾಟ ಕೇಳಿ ಬಂದಿದೆ ಎಂದು ಅದೇ ಕಟ್ಟಡದಲ್ಲಿದ್ದ ನೆರೆಹೊರೆಯವರು ಹಾಗೂ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಕೇಶವ್ ಕೊಲೆ ಮಾಡಿದ ನಂತರ ಪರಾರಿಯಾಗಲು ಯೋಜನೆ ರೂಪಿಸಿದ್ದು, ಸಂಬಂಧಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದೆಹಲಿಯ ಶ್ರದ್ಧಾ ವಾಕರ್ ಅವರನ್ನು ಆಕೆಯ ಸಂಗಾತಿ ಆಫ್ತಾಬ್ ಪೂನಾವಾಲಾ ಆಘಾತಕಾರಿ ಕೊಂದ ಸುದ್ದಿ ಹೊರಬಿದ್ದ ಒಂದು ವಾರದ ನಂತರ ಈ ಕೊಲೆಗಳು ನಡೆದಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 23 November 22