AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satish Jarkiholi; ಯತ್ನಾಳ್ ನಂಥ ಗಿರಾಕಿ ಆಡುವ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ: ಸತೀಶ್ ಜಾರಕಿಹೊಳಿ

ಬಿಜೆಪಿ ಸರ್ಕಾರಗಳು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಯತ್ನಾಳ್ ಗೆ ಹೇಳುವಂತೆ ಹೇಳ್ರೀ ಅಂತ ಸಚಿವರು ಹೇಳಿದರು.

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2023 | 4:44 PM

Share

ದೇವನಹಳ್ಳಿ: ದೆಹಲಿಗೆ ಹೊರಡುವ ಮೊದಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರನ್ನು (Basangouda Patil Yatnal) ಏಕವಚನಲ್ಲೇ ಜರಿದರು. ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳು (guarantees) ಈಡೇರುವುದು ಯಾವ ಕಾಲಕ್ಕೋ ಅಂತ ಟೀಕಿಸಿರುವುದನ್ನು ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ, ಅಂಥ ಗಿರಾಕಿ ಯಾರು ಉತ್ತರ ಕೊಡ್ತಾರೆ, ನಾವು ಈಗಷ್ಟೇ ಅಧಿಕಾರವಹಿಸಿಕೊಂಡಿದ್ದೀವಿ, ಜನತೆಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ನಾವು ಈಡೇರಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಬಿಜೆಪಿ ಸರ್ಕಾರಗಳು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಯತ್ನಾಳ್ ಗೆ ಹೇಳುವಂತೆ ಹೇಳ್ರೀ ಅಂತ ಸಚಿವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ