AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satish Jarkiholi; ಇನ್ನೂ ಸಾಕಷ್ಟು ಜನ ಸಚಿವಾಕಾಂಕ್ಷಿಗಳಿದ್ದಾರೆ ಮತ್ತು ಅವರೆಲ್ಲ ಸಮರ್ಥರೂ ಆಗಿದ್ದಾರೆ: ಸತೀಶ್ ಜಾರಕಿಹೊಳಿ

Satish Jarkiholi; ಇನ್ನೂ ಸಾಕಷ್ಟು ಜನ ಸಚಿವಾಕಾಂಕ್ಷಿಗಳಿದ್ದಾರೆ ಮತ್ತು ಅವರೆಲ್ಲ ಸಮರ್ಥರೂ ಆಗಿದ್ದಾರೆ: ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2023 | 12:59 PM

ಇದು ಮೊದಲ ಹಂತದ ಸಂಪುಟ ರಚನೆಯಾಗಿದೆ, ಮುಂದೆ ಎರಡು ಮತ್ತು ಮೂರನೇ ಹಂತದ ಸಂಪುಟ ವಿಸ್ತರಣೆಯಾಗಲಿದೆ ಎಂದು ಸತೀಶ್ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಮತ್ತು ಉಪ-ಮುಖ್ಯಮಂತ್ರಿ ಜೊತೆ ಇಂದು ಪ್ರಮಾಣವಚನ ಸ್ವೀಕರಿಸಿದ 8 ಸಚಿವ ಸಂಪುಟ ದರ್ಜೆ ಸಚಿವರಲ್ಲಿ, ಯಮಕರನಮರಡಿಯಿಂದ ವಿಧಾನ ಸಭೆಗೆ ಆಯ್ಕೆಯಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಕೂಡ ಸೇರಿದ್ದಾರೆ. ನಗರದಲ್ಲಿಂದು ಟಿವಿ9 ಕನ್ನಡ ವಾಹಿನಿ ವರರಿಗಾರನೊಂದಿಗೆ ಮಾತಾಡಿದ ಸತೀಶ್ ಜಾರಕಿಗೊಳಿ ಹಿರಿತನದ (seniority) ಆಧಾರದಲ್ಲಿ ತಮಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಹೇಳಿದರು. ಇದು ಮೊದಲ ಹಂತದ (first phase) ಸಂಪುಟ ರಚನೆಯಾಗಿದೆ, ಮುಂದೆ ಎರಡು ಮತ್ತು ಮೂರನೇ ಹಂತದ ಸಂಪುಟ ವಿಸ್ತರಣೆಯಾಗಲಿದೆ. ಇನ್ನೂ ಬಹಳಷ್ಟು ಜನ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ ಮತ್ತು ಅವರೆಲ್ಲ ಸಮರ್ಥರೂ ಅಗಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ