ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಧರ್ಮದ ಪಾಲನೆ ಮಾಡುತ್ತಿದ್ದಾರೆ: ಕೋಡಿ ಶೀಗಳು

|

Updated on: Sep 11, 2023 | 6:06 PM

ಪಕ್ಷದೊಳಗಿನ ಆಂತರಿಕ ಕಚ್ಚಾಟದ ಬಗ್ಗೆ ಮಾತಾಡಿದ ಶ್ರೀಗಳು ಅತೃಪ್ತರು ಎಲ್ಲ ಕಡೆ ಇರುತ್ತಾರೆ ಅಂತ ಹೇಳಿದರು. ಸಿದ್ದರಾಮಯ್ಯ 5-ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಅಂತ ಕೇಳಿದ ಪ್ರಶ್ನೆಗೆ ಶ್ರೀಗಳು ಏನನ್ನೂ ಹೇಳದೆ ನಕ್ಕು ಸುಮ್ಮನಾದರು. ಆರ್ಥಿಕ ದಿವಾಳಿತನದ ಬಗ್ಗೆ ಪುನಃ ಕೇಳಿದ ಪ್ರಶ್ನೆಗೆ ಅವರು, ಭಾರತ ಮತ್ತು ಕರ್ನಾಟಕ ಎರಡೂ ಸಂಪತ್ಭರಿತವಾಗಿವೆ, ಅಂಥದ್ದೇನೂ ಆಗದು ಎಂದರು.

ಹುಬ್ಬಳ್ಳಿ: ಕೋಡಿಮಠದ ಪೀಠಾಧ್ಯಕ್ಷ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು (ಕೋಡಿ ಶ್ರೀಗಳು) ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಉತ್ತಮ ಮಾತುಗಳನ್ನಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದ ರಾಜ್ಯಕ್ಕೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ ಅಂತ ಪತ್ರಕರ್ತರೊಬ್ಬರು ಶ್ರೀಗಳಿಗೆ ಹೇಳಿದಾಗ ಅಂಥದ್ದೇನೂ ಸಂಭವಿಸುವುದಿಲ್ಲ ಎಂದು ಅವರು ಹೇಳಿದರು. ಸಿದ್ದರಾಮಯ್ಯ ರಾಜ್ಯದ ಜನತೆಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ, ಮಹಿಳೆಯರಿಗೆ ಬಸ್ ಪಯಣ ಉಚಿತ ಮಾಡಿದ್ದರಿಂದ ಹೆಣ್ಣುಮಕ್ಕಳು ಪುಣ್ಯಕ್ಷೇತ್ರಗಳಿಗೆ, ಮಠಮಾನ್ಯಗಳಿಗೆ ಭೇಟಿ ನೀಡುವುದು ಸಾಧ್ಯವಾಗುತ್ತಿದೆ, ಅವರು ಮಾಡುತ್ತಿರುವುದರಲ್ಲಿ ತಪ್ಪೇನೂ ಇಲ್ಲ, ರಾಜಧರ್ಮದ ಪಾಲನೆ ಮಾಡುತ್ತಿದ್ದಾರೆ, ತಮ್ಮ ಜನರನ್ನು ಸಂತೋಷವಾಗಿಡುವ ಕೆಲಸ ಹಿಂದಿನ ರಾಜರು ಮಾಡುತ್ತಿದ್ದದರು, ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಕೂಡ ಅದನ್ನು ಮಾಡುತ್ತಿದೆ ಎಂದು ಶ್ರೀಗಳು ಹೇಳಿದರು. ಪಕ್ಷದೊಳಗಿನ ಆಂತರಿಕ ಕಚ್ಚಾಟದ ಬಗ್ಗೆ ಮಾತಾಡಿದ ಶ್ರೀಗಳು ಅತೃಪ್ತರು ಎಲ್ಲ ಕಡೆ ಇರುತ್ತಾರೆ ಅಂತ ಹೇಳಿದರು. ಸಿದ್ದರಾಮಯ್ಯ 5-ವರ್ಷ ಅವಧಿಗೆ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆಯೇ ಅಂತ ಕೇಳಿದ ಪ್ರಶ್ನೆಗೆ ಶ್ರೀಗಳು ಏನನ್ನೂ ಹೇಳದೆ ನಕ್ಕು ಸುಮ್ಮನಾದರು. ಆರ್ಥಿಕ ದಿವಾಳಿತನದ ಬಗ್ಗೆ ಪುನಃ ಕೇಳಿದ ಪ್ರಶ್ನೆಗೆ ಅವರು, ಭಾರತ ಮತ್ತು ಕರ್ನಾಟಕ ಎರಡೂ ಸಂಪತ್ಭರಿತವಾಗಿವೆ, ಅಂಥದ್ದೇನೂ ಆಗದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ