ಬಾಲಗಂಗಾಧರ ನಾಥ ಸ್ವಾಮೀಜಿ ನನ್ನನ್ನು ಬಿಟ್ಟರೆ ಬೇರೆ ಯಾವ ರಾಜಕಾರಣಿಯನ್ನು ಅಷ್ಟು ಇಷ್ಟಪಡುತ್ತಿರಲಿಲ್ಲ- ಸಿಎಂ ಸಿದ್ದರಾಮಯ್ಯ

ಬಾಲಗಂಗಾಧರ ನಾಥ ಸ್ವಾಮೀಜಿ ನನ್ನನ್ನು ಬಿಟ್ಟರೆ ಬೇರೆ ಯಾವ ರಾಜಕಾರಣಿಯನ್ನು ಅಷ್ಟು ಇಷ್ಟಪಡುತ್ತಿರಲಿಲ್ಲ- ಸಿಎಂ ಸಿದ್ದರಾಮಯ್ಯ

ಸಾಧು ಶ್ರೀನಾಥ್​
|

Updated on: Sep 11, 2023 | 5:03 PM

Balgangadhar Nath Swamiji: ಶ್ರೀಗಳು ನನ್ನ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಬಾಲಗಂಗಾಧರನಾಥಶ್ರೀ, ನಿರ್ಮಲಾನಂದನಾಥಶ್ರೀಗೆ ನಾನು ಚಿರ‌ಋಣಿ. ಬಾಲಗಂಗಾಧರ ನಾಥ ಸ್ವಾಮೀಜಿ ನನ್ನನ್ನು ಇಷ್ಟಪಡುತ್ತಿದ್ದಷ್ಟು ಬೇರೆ ಯಾವ ರಾಜಕಾರಣಿಯನ್ನು ಇಷ್ಟಪಡುತ್ತಿರಲಿಲ್ಲ ಎಂದು ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಆದಿಚುಂಚನಗಿರಿ ಶಾಖಾ ಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸೋಮವಾರ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ (Siddaramaiah in Mysore) ಅವರು ಮೊದಲ ಬಾರಿಗೆ ಕೆಂಪೇಗೌಡ ಜಯಂತಿ ಮಾಡಿದ್ದು ನಮ್ಮ ಸರ್ಕಾರ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಸಹ ನಮ್ಮ ಸರ್ಕಾರ. ಏರ್​ಪೋರ್ಟ್​ಗೆ ನಾಡಪ್ರಭು ಕೆಂಪೇಗೌಡರ ಹೆಸರಿಟ್ಟಿದ್ದು ನಾವೇ ಎಂದು ತಿಳಿಸಿದರು. ಈ ವೇಳೆ, ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಬಾಲ ಗಂಗಾಧರನಾಥ ಶ್ರೀಗಳ ಪ್ರತಿಮೆಗೆ CM Siddaramaiah ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಶ್ರೀಗಳು ನನ್ನ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟುಕೊಂಡಿದ್ದಾರೆ. ಬಾಲಗಂಗಾಧರನಾಥಶ್ರೀ, ನಿರ್ಮಲಾನಂದನಾಥಶ್ರೀಗೆ ನಾನು ಚಿರ‌ಋಣಿ. ಬಾಲಗಂಗಾಧರ ನಾಥ ಸ್ವಾಮೀಜಿ (Balgangadhar Nath Swamiji) ನನ್ನನ್ನು ಇಷ್ಟಪಡುತ್ತಿದ್ದಷ್ಟು ಬೇರೆ ಯಾವ ರಾಜಕಾರಣಿಯನ್ನು ಇಷ್ಟಪಡುತ್ತಿರಲಿಲ್ಲ ಎಂದು ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ