ಹರಿಪ್ರಸಾದ್ ಮಾತು ಒಬ್ಬ ಪ್ರಬುದ್ಧ ರಾಜಕಾರಣಿಗೆ ಶೋಭೆ ನೀಡುವುದಿಲ್ಲ: ದಿನೇಶ್ ಗುಂಡೂರಾವ್

ಹರಿಪ್ರಸಾದ್ ಮಾತು ಒಬ್ಬ ಪ್ರಬುದ್ಧ ರಾಜಕಾರಣಿಗೆ ಶೋಭೆ ನೀಡುವುದಿಲ್ಲ: ದಿನೇಶ್ ಗುಂಡೂರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 11, 2023 | 7:02 PM

ಅವರ ಬಗ್ಗೆ ಈಗಾಗಲೇ ಹೈ ಕಮಾಂಡ್ ಗೆ ದೂರು ಹೋಗಿದೆ ಮತ್ತು ವರಿಷ್ಠರು ಹಾಗೆ ಮಾತಾಡದಂತೆ ತಾಕೀತು ಕೂಡ ಮಾಡಿದೆ ಅಂತ ಸಚಿವ ಹೇಳಿದರು. ಯಾಕೆ ಹರಿಪ್ರಸಾದ್ ಅವರಿಗೆ ಆ ಪರಿ ಅಸಮಾಧಾನ ಅಂತ ಮಾಧ್ಯಮದವರು ಕೇಳಿದರೆ, ಅದನ್ನು ಅವರಿಂದಲೇ ತಿಳಿದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳೂರು: ಬಿಕೆ ಹರಿಪ್ರಸಾದ್ (BK Hariprasad) ರಾಜ್ಯ ಕಾಂಗ್ರೆಸ್ ಹಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದ್ದಾರೆಯೇ? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ನಗರದಲ್ಲಿಂದು ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದದ್ದು ಕೇಳಿದರೆ ಹೌದೆನಿಸುತ್ತದೆ. ಪ್ರಾಯಶಃ ದಿನೇಶ್ ಅವರು ಹರಿಪ್ರಸಾದ್ ಬೇರೆ ಬೇರೆ ವೇದಿಕೆಗಳಲ್ಲಿ ಆಡಿರುವ ಸಿದ್ದರಾಮಯ್ಯ-ವಿರೋಧಿ (anti Siddaramaiah) ಮಾತುಗಳನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್ ನ ಮೊದಲ ನಾಯಕರಾಗಿದ್ದಾರೆ. ಹರಿಪ್ರಸಾದ್ ಯಾರ ಬಗ್ಗೆ ಮಾತಾಡಿದ್ದಾರೋ ಅರ್ಥವಾಗುತ್ತಿಲ್ಲ, ಒಬ್ಬ ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿಯಾಗಿದ್ದಾರೆ, ಹಾಗೆ ಮಾತಾಡುವುದು ಅವರಿಗೆ ಶೋಭೆ ನೀಡುವುದಿಲ್ಲ. ಅವರು ಹಾಗೆ ಮಾತಾಡಿದ್ದು ಪಕ್ಷ ಮತ್ತು ಪಕ್ಷದ ನಾಯಕರಿಗಿಂತ ಖುದ್ದು ಅವರಿಗೆ ಹೆಚ್ಚು ಹಾನಿಯನ್ನುಂಟು ಮಾಡಿದೆ ಎಂದು ದಿನೇಶ್ ಹೇಳಿದರು. ಅವರ ಬಗ್ಗೆ ಈಗಾಗಲೇ ಹೈ ಕಮಾಂಡ್ ಗೆ ದೂರು ಹೋಗಿದೆ ಮತ್ತು ವರಿಷ್ಠರು ಹಾಗೆ ಮಾತಾಡದಂತೆ ತಾಕೀತು ಕೂಡ ಮಾಡಿದೆ ಅಂತ ಸಚಿವ ಹೇಳಿದರು. ಯಾಕೆ ಹರಿಪ್ರಸಾದ್ ಅವರಿಗೆ ಆ ಪರಿ ಅಸಮಾಧಾನ ಅಂತ ಮಾಧ್ಯಮದವರು ಕೇಳಿದರೆ, ಅದನ್ನು ಅವರಿಂದಲೇ ತಿಳಿದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ