Dinesh Gundurao: ಅಂಗಾಂಗ ದಾನ ಬಹಳ ಮುಖ್ಯ; ಅದರ ಬಗ್ಗೆ ಜಾಗೃತಿ ಇಲ್ಲ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಾದ

Dinesh Gundurao: ಅಂಗಾಂಗ ದಾನ ಬಹಳ ಮುಖ್ಯ; ಅದರ ಬಗ್ಗೆ ಜಾಗೃತಿ ಇಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಾದ

ಪ್ರಸನ್ನ ಗಾಂವ್ಕರ್​
| Updated By: ಸಾಧು ಶ್ರೀನಾಥ್​

Updated on: Aug 03, 2023 | 5:05 PM

Organ donation: ಅಂಗಾಂಗ ದಾನ ಬಹಳ ಮುಖ್ಯವಾದುದು. ಆದರೆ ಅದರ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.

ಅಂಗಾಂಗ ದಾನ (Organ donation) ಬಹಳ ಮುಖ್ಯವಾದುದು. ಆದರೆ ಅದರ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundurao) ವಿಷಾದ ವ್ಯಕ್ತಪಡಿಸಿದ್ದಾರೆ. ಮೂಢನಂಬಿಕೆಯಿಂದಾಗಿ ಬಹಳಷ್ಟು ಜನ ಅಂಗಾಂಗ ದಾನ ಮಾಡುವುದಕ್ಕೆ ಮುಂದೆ ಬರುತ್ತಿಲ್ಲ. ಹಾಗಾಗಿ ಸ್ವಾಮೀಜಿಗಳು, ಸಮಾಜದ ಗಣ್ಯರಿಂದ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಸರ್ಕಾರದ ವತಿಯಿಂದಲೂ ಅಂಗಾಂಗ ದಾನದ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುತ್ತೇವೆ ಎಂದು ಅವರು ಭರವಸೆಯ ಮಾತುಗಳನ್ನಾಡಿದರು.

ಇನ್ನು ರಾಜ್ಯದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಷ್ಟೇ ಒತ್ತಡವಿದ್ರೂ ಸಮರ್ಪಕವಾಗಿ ಗ್ಯಾರಂಟಿ ಅನುಷ್ಠಾನಕ್ಕೆ ರಾಜ್ಯದ ಎಲ್ಲಾ ಸಚಿವರು, ಶಾಸಕರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಜನರು ಮೆಚ್ಚುವಂತಹ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಲೋಕಸಭಾ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆಗೆ ಸೂಚನೆ ನಿಡಿದ್ದಾರೆ ಎಂದು ಹೇಳಿದರು.

ಖರ್ಗೆ, ಖಂಡ್ರೆ ಬಗ್ಗೆ ಆರಗ ಜ್ಞಾನೇಂದ್ರ ಅವಹೇಳನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ಅವರು ಅವರ ಮನಸ್ಸಿನ ಹೇಳಿಕೆಗಳು ಹೊರಗೆ ಬಂದಿವೆ. ಖರ್ಗೆ ಅವರಿಗೆ ಹೇಳಿಲ್ಲಾ ಅಂತಾರೆ, ಖಂಡ್ರೆ ಬಗ್ಗೆ ಹೇಳೋದೂ ತಪ್ಪಲ್ವಾ? ಸ್ಪಷ್ಟೀಕರಣ ಬೇಡ, ಮಾತಾಡೋದು ಮಾತಾಡಿ ಈಗ ಸ್ಪಷ್ಟೀಕರಣ ಕೋಡೋದೇ ತಪ್ಪು. ಖರ್ಗೆ ಅಥವಾ ಯಾರ ಬಗ್ಗೆಯೇ ಮಾತಾಡಿದ್ರೂ ತಪ್ಪು. ಅವರಲ್ಲಿ ಪೂರ್ವಾಗ್ರಹಪೀಡಿತ ಮನಸ್ಸು ಎದ್ದು ಕಾಣ್ತಾ ಇದೆ. ಅತ್ಯಂತ ಖಂಡನೀಯ ಹೇಳಿಕೆ ಅದು. ಬಿಜೆಪಿಯವ್ರು ಯಾರ ಮೇಲಾದ್ರೂ ಶಿಸ್ತು ಕ್ರಮ ತಗೋತಾರಾ? ಕೆಟ್ಟ ರೀತಿಯಲ್ಲಿ ಮಾತಾಡೋ ಸಂಸ್ಕೃತಿ ಇರೋದೇ ಬಿಜೆಪಿಯಲ್ಲಿ ಎಂದು ಸಚಿವ ದಿನೇಶ್ ಗುಂಡೂರಾವ್ ವಿಷಾದಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ