ಎಎಂಪಿಕೆ ಕಾರ್ಯಕ್ರಮ ಅನಾವರಣ ಮಾಡುವ ಘೋಷಣೆಯಾದಾಗ ಸಿಎಂ ಸಿದ್ದರಾಮಯ್ಯ ಫೋನಲ್ಲಿ ಮಗ್ನ, ವೇದಿಕೆಯಲ್ಲಿದ್ದವರಿಗೆ ಪೀಕಲಾಟ!
ಕೊನೆಗೆ ಅವರು ಮಾಡಬೇಕಿದ್ದುದನ್ನು ಸ್ಕಿಪ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರನ್ನು ಭಾಷಣಕ್ಕೆ ಕರೆದಾಗ ಸಿದ್ದರಾಮಯ್ಯನವರ ಫೋನ್ ಸಂಭಾಷಣೆ ಮುಗಿಯುತ್ತದೆ. ಪೋಡಿಯಂ ಬಳಿ ಹೋಗಿದ್ದ ಸಚಿವೆ ವಾಪಸ್ಸು ಬರಬೇಕಾಗುತ್ತದೆ.
ಬೆಂಗಳೂರು: ದೊಡ್ಡವರ ಮಾತೇ ಹಾಗೆ ಸ್ವಾಮಿ, ಯಾರೇನೂ ಮಾಡಲಾಗಲ್ಲ. ಸಾಮಾನ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವೇದಿಕೆ ಮೇಲೆ ಫೋನ್ ಬಳಸುವುದಿಲ್ಲ, ತೀರ ಅನಿವಾರ್ಯ ಅನಿಸಿದಲ್ಲಿ ಮಾತ್ರ ಮಾತಾಡೋದುಂಟು. ಅಂಥ ಅನಿವಾರ್ಯತೆ ಇವತ್ತು ಉಂಟಾಗಿತ್ತು ಅನಿಸುತ್ತದೆ. ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ (Anaemia Mukt Poushtik Karnataka) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಕಾರ್ಯಕ್ರಮ ಅನಾವರಣ ಮಾಡುವ ವಿಧಿ ಪೂರೈಸುವ ಸಂದರ್ಭದಲ್ಲಿ ಪೋನಲ್ಲಿ ಗಂಭೀರ ಸಂಭಾಷಣೆಯಲ್ಲಿ ತೊಡಗಿರುತ್ತಾರೆ. ನಿರೂಪಕಿ ಎರಡೆರಡು ಸಲ ಘೋಷಣೆ ಮಾಡಿದರೂ ಮುಖ್ಯಮಂತ್ರಿ ಗಂಭೀರ ಮುಖಮುದ್ರೆಯೊಂದಿಗೆ ಫೋನಲ್ಲಿ ಮಗ್ನ. ಕೊನೆಗೆ ಅವರು ಮಾಡಬೇಕಿದ್ದುದನ್ನು ಸ್ಕಿಪ್ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರನ್ನು ಭಾಷಣಕ್ಕೆ ಕರೆದಾಗ ಸಿದ್ದರಾಮಯ್ಯನವರ ಫೋನ್ ಸಂಭಾಷಣೆ ಮುಗಿಯುತ್ತದೆ. ಪೋಡಿಯಂ ಬಳಿ ಹೋಗಿದ್ದ ಸಚಿವೆ ವಾಪಸ್ಸು ಬರಬೇಕಾಗುತ್ತದೆ. ವೇದಿಕೆ ಮೇಲೆ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಭೈರತಿ ಸುರೇಶ್ ಅವರನ್ನೂ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ