ಕುಮಾರಸ್ವಾಮಿಯ ಪೋಸ್ಟರ್ ಅಂಟಿಸಿದನ್ನು ಆರೋಪಿಸಿ ಕಾಂಗ್ರೆಸ್ ಮುಖಂಡನ ವಿರುದ್ಧ ಪೊಲೀಸ್ ಆಯುಕ್ತರಿಗೆ ಜೆಡಿಎಸ್ ದೂರು
ಪೋಸ್ಟರ್ ಹಚ್ಚಿದ ಕಾಂಗ್ರೆಸ್ ಮುಖಂಡನ ಹೆಸರು ಎಸ್ ಮನೋಹರ್ ಅಂತ ಹೇಳಿದ ರಮೇಶ್ , ಅವರ ಪೋಸ್ಟರ್ ಮಾಧ್ಯಮಗಳಿಗೆ ತೋರಿಸಿ ಅವನೊಬ್ಬ ಲೋಫರ್ ಎಂದರು. ಮನೋಹರ್, ಪೋಸ್ಟರ್ ಗಳನ್ನು ಅಂಟಿಸಿದ ಉದ್ದೇಶ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವುದಾಗಿತ್ತು. ಅವರು ಕೆರಳಿ ದಾಂಧಲೆ ಮಾಡುವಂತಾಗಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿಸುವುದು ಅವನ ಗುರಿಯಾಗಿತ್ತು ಎಂದು ರಮೇಶ್ ಗೌಡ ಹೇಳಿದರು.
ಬೆಂಗಳೂರು: ಸದಾ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನೆರಳಿನಂತಿರುತ್ತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ (Ramesh Gowda) ಈಗ ಸ್ವತಂತ್ರವಾಗಿ ಮಾಧ್ಯಮಗಳೊಂದಿಗೆ ಮಾತಾಡಲಾರಂಭಿಸಿದ್ದಾರೆ. ನಗರದಲ್ಲಿ ಹಲವೆಡೆ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ಕಳ್ಳ ಅಂತ ಪೋಸ್ಟರ್ ಗಳನ್ನು ಅಂಟಿಸಿದ ಕಾಂಗ್ರೆಸ್ ಮುಖಂಡನೊಬ್ಬನ ವಿರುದ್ಧ ನಗರ ಪೊಲೀಸ್ ಕಮೀಶನರ್ ಅವರಿಗೆ ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಮೇಶ್ ಗೌಡ, ಪೋಸ್ಟರ್ ಹಚ್ಚಿದ ಕಾಂಗ್ರೆಸ್ ಮುಖಂಡನ ಹೆಸರು ಎಸ್ ಮನೋಹರ್ (S Manohar) ಅಂತ ಹೇಳಿ ಅವರ ಪೋಸ್ಟರ್ ಮಾಧ್ಯಮಗಳಿಗೆ ತೋರಿಸಿ ಅವನೊಬ್ಬ ಲೋಫರ್ ಎಂದರು. ಮನೋಹರ್, ಪೋಸ್ಟರ್ ಗಳನ್ನು ಅಂಟಿಸಿದ ಉದ್ದೇಶ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವುದಾಗಿತ್ತು. ಅವರು ಕೆರಳಿ ದಾಂಧಲೆ ಮಾಡುವಂತಾಗಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಿಸುವುದು ಅವನ ಗುರಿಯಾಗಿತ್ತು ಎಂದು ರಮೇಶ್ ಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos