ಬೆಂಗಳೂರು ಕಂಬಳ: ಕೊನೆ ಹಂತದಲ್ಲಿರುವ ಸಿದ್ಧತೆಗಳು, ದಷ್ಟಪುಷ್ಟ ಕೋಣಗಳು ಅರಮನೆ ಮೈದಾನಕ್ಕೆ ಆಗಮಿಸುತ್ತಿವೆ!

ಬೆಂಗಳೂರು ಕಂಬಳ: ಕೊನೆ ಹಂತದಲ್ಲಿರುವ ಸಿದ್ಧತೆಗಳು, ದಷ್ಟಪುಷ್ಟ ಕೋಣಗಳು ಅರಮನೆ ಮೈದಾನಕ್ಕೆ ಆಗಮಿಸುತ್ತಿವೆ!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Nov 23, 2023 | 12:12 PM

Bengaluru Kambala: ಇಲ್ಲಿ ಕೇವಲ ಕಂಬಳ ಕ್ರೀಡೆ ಮಾತ್ರ ನಡೆಯುವುದಿಲ್ಲ ಮಾರಾಯ್ರೇ, ಪೂರ್ತಿ ಕುಡ್ಲ ಮತ್ತು ತುಳು ಸಂಸ್ಕೃತಿ ಇಲ್ಲಿಅನಾವರಣಗೊಳ್ಳಲಿದೆ. ಕರಾವಳಿ ತಿಂಡಿ ತಿನಿಸು ಮತ್ತು ಊಟಕ್ಕಾಗಿ 200 ಮಳಿಗೆಗಳನ್ನು ಹಾಕಲಾಗಿದೆ. ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ಬರಲಾರಂಭಿಸಿದ್ದು ಕೆಲ ದಷ್ಟ ಪುಷ್ಟ ಕೋಣಗಳನ್ನು ದೃಶ್ಯಗಳಲ್ಲಿ ನೋಡಬಹುದು.

ಬೆಂಗಳೂರು: ಬೆಂಗಳೂರಲ್ಲಿ ಕಂಬಳ ಅಂದಾಗ ಕನ್ನಡಿಗರೆಲ್ಲ ಹುಬ್ಬೇರಿಸಿದ್ದರು. ಆದರೆ ಶಾಸಕ ಅಶೋಕ ರೈ (Ashok Rai) ಮತ್ತು ಮಂಗಳೂರು ಮತ್ತು ಬೆಂಗಳೂರು ಮೂಲದ ಸಂಘಟನೆಗಳಿಂದ ಸಾಧ್ಯವಾಗುತ್ತಿದೆ ಮತ್ತು ಈ ರೋಮಾಂಚಕಾರಿ ಕ್ರೀಡೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ರವಿವಾರ- ಎರಡು ದಿನಗಳ ಕಾಲ ನಡೆಯಲಿರುವ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳಕ್ಕೆ (Bengaluru Kambala) ಟ್ರ್ಯಾಕ್ ರೆಡಿಯಾಗಿರುವುದನ್ನು ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿ ತೋರಿಸುತ್ತಿದ್ದಾರೆ. ಇದರ ಉದ್ದ 157 ಮೀ ಮತ್ತು ಅಗಲ 8 ಮೀಟರ್ ಅಂತ ಹೇಳಲಾಗುತ್ತಿದೆ. ಸಿದ್ಧತೆಗಳೆಲ್ಲ ಮುಕ್ತಾಯ ಹಂತದಲ್ಲಿವೆ. ಇಲ್ಲಿ ಕೇವಲ ಕಂಬಳ ಕ್ರೀಡೆ ಮಾತ್ರ ನಡೆಯುವುದಿಲ್ಲ ಮಾರಾಯ್ರೇ, ಪೂರ್ತಿ ಕುಡ್ಲ ಮತ್ತು ತುಳು ಸಂಸ್ಕೃತಿ ಇಲ್ಲಿಅನಾವರಣಗೊಳ್ಳಲಿದೆ. ಕರಾವಳಿ ತಿಂಡಿ-ತಿನಿಸು (Mangaluru delicacies) ಮತ್ತು ಊಟಕ್ಕಾಗಿ 200 ಮಳಿಗೆಗಳನ್ನು ಹಾಕಲಾಗಿದೆ. ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ಬರಲಾರಂಭಿಸಿದ್ದು ಕೆಲ ದಷ್ಟ ಪುಷ್ಟ ಕೋಣಗಳನ್ನು (buffaloes) ದೃಶ್ಯಗಳಲ್ಲಿ ನೋಡಬಹುದು. ಸುಮಾರು 6-7 ಲಕ್ಷ ಜನ ಕಂಬಳ ವೀಕ್ಷಿಸಿಲಿದ್ದಾರೆಂದು ಹೇಳಲಾಗುತ್ತಿದ್ದು ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿಮ್ಮ ಈ ಬಾರಿಯ ವೀಕೆಂಡನ್ನು ಬೆಂಗಳೂರು ಕಂಬಳಕ್ಕೆ ಮೀಸಲಿಡಿ ಅಂತ ಪ್ರತ್ಯೇಕವಾಗಿ ಹೇಳಬೇಕೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 22, 2023 07:27 PM