ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯರಿಂದ ಪುನಃ ಅಸಮಂಜಸ ಪ್ರತಿಕ್ರಿಯೆ!

|

Updated on: Jul 04, 2024 | 5:50 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳೋದನ್ನು ಕೇಳಿದರೆ, ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕೆಂದು ವಿರೋಧ ಪಕ್ಷಗಳು ಕೇವಲ ಜನರನ್ನು ಇಂಪ್ರೆಸ್ ಮಾಡಲು ಮತ್ತು ಸುದ್ದಿಯಲ್ಲಿರಲು ಕೇಳುತ್ತವೆ ಅನಿಸುತ್ತದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಒತ್ತಾಯಿಸಿದರೂ ಯಾವುದೇ ಪ್ರಕರಣ ಸಿಬಿಐಗೆ ಒಪ್ಪಿಸಿರಲಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಅಂದರೆ, ವಿರೋಧ ಪಕ್ಷ ಹೊಡೆದಂತೆ ಮಾಡಿದಾಗ ಆಡಳಿತ ಪಕ್ಷ ಅತ್ತಂತೆ ಮಾಡೋದೇ ಪರಿಪಾಠವೇ?

ಬೆಂಗಳೂರು: ಮುಡಾದಲ್ಲಿ ಸೈಟು ಹಂಚಿಕೆಯಲ್ಲಿ ಆಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳುವ ಪ್ರಯತ್ನವೇನೂ ಮಾಡುತಿಲ್ಲ ಅದರೆ ಅವರು ನೀಡುವ ಉತ್ತರ ಮತ್ತು ಸಮಜಾಯಿಷಿಗಳು ಸಮಂಜಸ ಅನಿಸುತ್ತಿಲ್ಲ. ಇವತ್ತು ವಿಧಾನಸಭೆಗೆ ಬಂದ ಮುಖ್ಯಮಂತ್ರಿಯವರನ್ನು ಮಾಧ್ಯಮದವರು ಕೇಳಿದ ಅದೇ ಮುಡಾ ಅಕ್ರಮದ ಪ್ರಶ್ನೆಗೆ ಅವರು ಮೈಕ್ ಗಳ ಹತ್ತಿರಕ್ಕೆ ಬಾರದೆ ದೂರದಿಂದಲೇ ಉತ್ತರಿಸಿದರು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಅಂತ ಬಿಜೆಪಿ ನಾಯಕರು ಅನ್ನುತ್ತಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ, ನಾವು ಇದುವರೆಗೆ ಏಳು ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇವೆ, ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಹಲವಾರು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದ್ದರೂ ಒಂದೇ ಒಂದು ಪ್ರಕರಣವನ್ನು ಕೊಟ್ಟಿರಲಿಲ್ಲ, ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ನಿನ್ನೆ ಕೊಟ್ಟ ಉತರವನ್ನೇ ಪುನರಾವರ್ತಿಸಿದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಾಲ್ಮೀಕಿ ನಿಗಮದ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಪಾಟೀಲ್ ಯತ್ನಾಳ್

Published on: Jul 04, 2024 01:37 PM