ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ತಪ್ಪುದಾರಿಗೆ ಎಳೆದೊಯ್ಯುತ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ, ಚಿಂತಕ
ಮುಸ್ಲಿಂ ಸಮುದಾಯ ಕಲ್ಯಾಣಕ್ಕೆ ರೂ. 10,000 ಕೋಟಿ ಕೊಡೋದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ ಅದರೆ ಅಷ್ಟು ದೊಡ್ಡ ಮೊತ್ತವನ್ನು ಹೇಗೆ ಹೊಂದಿಸಲಿದ್ದಾರೆ ಅನ್ನೋದು ಜನಕ್ಕೆ ಅರ್ಥವಾಗುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಅನುದಾನ ಅಥವಾ ಶಾಲಾಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿ ಅವರು ಹಣ ನೀಡುತ್ತಾರೆಯೇ ಅಂತ ಸೂಲಿಬೆಲೆ ಪ್ರಶ್ನಿಸಿದರು.
ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯುವ ಬ್ರಿಗೇಡ್ (Yuva Brigade) ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹಿಜಾಬ್ ನಿಷೇಧ ಆದೇಶವನ್ನು ವಾಪಸ್ಸು ಪಡೆಯುವ ಸಿದ್ದರಾಮಯ್ಯ ಸರ್ಕಾರದ (Siddaramaiah government) ನಿರ್ಧಾರವನ್ನು ಖಂಡಿಸಿದರು. ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಓಡಾಡಿದರೆ, ಹಿಂದೂ ವಿದ್ಯಾರ್ಥಿಗಳು ತಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಅಂತ ಹಟ ಹಿಡಿಯುತ್ತಾರೆ, ಸಿದ್ದರಾಮಯ್ಯ ಅವರ ನಿರ್ಧಾರ ಇಂಥ ವೈರುದ್ಧ್ಯಕ್ಕೆ ಕಾರಣವಾಗಲಿದೆ ಎಂದು ಸೂಲಿಬೆಲೆ ಹೇಳಿದರು. ಅತಾರ್ಕಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಅರು ತಿಂಗಳ ಅವಧಿಯಲ್ಲಿ ಜನರಿಂದ ತಿರಸ್ಕಾರಕ್ಕೊಗಾಗಿರುವ ದೇಶ ಮೊದಲ ಸರ್ಕಾರ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು ಎಂದು ಅವರು ಹೇಳಿದರು. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ರಾಜ್ಯವನ್ನು 25 ವರ್ಷಗಳಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಿದ್ದರೆ, ಸಿದ್ದರಾಮಯ್ಯ ಸರ್ಕಾರ ನಾಡನ್ನು 50 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದೆ ಅಂತ ಸೂಲಿಬೆಲೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ