Popularity quotient: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲೆಲ್ಲ ಜನಪ್ರಿಯರಾಗಿದ್ದರೆ, ಮೈಸೂರು ಭಾಗದಲ್ಲಿ ಯತೀಂದ್ರ ಅಪ್ಪನಿಗಿಂತ ಹೆಚ್ಚು ಪಾಪ್ಯುಲರ್!
ಸಿದ್ದರಾಮಯ್ಯ ಮತ್ತು ಯತೀಂದ್ರ ಇಂದು ಹೆಲಿಕಾಪ್ಟ್ಟರ್ ನಲ್ಲಿ ವರುಣಾಗೆ ಆಗಮಿಸಿದಾದ ಸಹಜವಾಗೇ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಗಳನ್ನು ಸುತ್ತುವರೆಯುತ್ತಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರ್ನಾಟಕ ಅತ್ಯಂತ ಜನಪ್ರಿಯ ಮತ್ತು ಮಾಸ್ ಲೀಡರ್ (mass leader) ಆಗಿರಬಹುದು. ಆದರೆ ಒಂದು ಮಾತಂತೂ ಸತ್ಯ, ಹಳೆ ಮೈಸೂರು ಭಾಗದಲ್ಲಿ ಅವರ ಮಗ ಹಾಗೂ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನೇ (Yatindra Siddaramaiah) ಹೆಚ್ಚು ಜನಪ್ರಿಯ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಅದಕ್ಕೆ ಜ್ವಲಂತ ಉದಾಹರಣೆ ಇಲ್ಲಿದೆ. ಸಿದ್ದರಾಮಯ್ಯ ಮತ್ತು ಯತೀಂದ್ರ ಇಂದು ಹೆಲಿಕಾಪ್ಟರ್ ನಲ್ಲಿ ವರುಣಾಗೆ ಆಗಮಿಸಿದಾದ ಸಹಜವಾಗೇ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಗಳನ್ನು ಸುತ್ತುವರೆಯುತ್ತಾರೆ. ಆದರೆ ಮಿಕ್ಕಿದ ಜನ, ಸ್ಥಳೀಯರು, ಚಿಕ್ಕಪುಟ್ಟ ಪುಢಾರಿಗಳು ಯತೀಂದ್ರರಲ್ಲಿಗೆ ಓಡಿಬರುತ್ತಾರೆ. ವಿಡಿಯೋದಲ್ಲಿ ನಿಮಗದು ಸ್ಪಷ್ಟವಾಗಿ ಕಾಣುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

