ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಿಂದ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಚುನಾವಣಾ ಸಮಯದಲ್ಲಿ ಜನತೆಗೆ ನೀಡಿದ 5 ಗ್ಯಾರಂಟಿಗಳನ್ನು ಜನತೆಗೆ ತಲುಪಿಸುವುದು ಸರಕಾರ ಆದ್ಯತೆಯಾಗಿದೆ ಮತ್ತು ಅವುಗಳ ಹೊರತಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 78 ಭರವಸೆಗಳನ್ನು ನೀಡಿದೆ, ಅವೆಲ್ಲವನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಕಾಯಶೀಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ (KPCC office) ನಡೆದ ಸಭೆಯಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Polls) ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 20 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ಪೋಡಿಯಂ ಕುಟ್ಟುತ್ತಾ ಹೇಳಿದರು. ಕರ್ನಾಟಕದಿಂದ 20 ಸ್ಥಾನಗಳನ್ನು ತಪ್ಪದೆ ಗೆದ್ದು ಕೋಡುತ್ತೇವೆ ಅಂತ ಹೈಕಮಾಂಡ್ ಗೆ ಭರವಸೆ ನೀಡಿರುವುದಾಗಿ ಹೇಳಿದ ಸಿದ್ದರಾಮಯ್ಯ 2024 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಲೆಕ್ಕಕ್ಕೆ ಬರೋದಿಲ್ಲ ಮತ್ತು ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದ ಜೆಡಿಎಸ್ ಪಕ್ಷಕ್ಕೆ ಆ ಸ್ಥಾನವೂ ಈ ಬಾರಿ ದಕ್ಕದು ಎಂದು ಹೇಳಿದರು. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೂ ಒಂದೇ ಸೀಟು ಸಿಕ್ಕಿದ್ದನ್ನು ಮರೆತರೋ ಅಥವಾ ಮರೆತಂತೆ ನಟಿಸಿದರೋ ಗೊತ್ತ್ತಾಗಲಿಲ್ಲ. ಮುಂದುವರಿದು ಮಾತಾಡಿದ ಅವರು ಚುನಾವಣಾ ಸಮಯದಲ್ಲಿ ಜನತೆಗೆ ನೀಡಿದ 5 ಗ್ಯಾರಂಟಿಗಳನ್ನು ಜನತೆಗೆ ತಲುಪಿಸುವುದು ಸರಕಾರ ಆದ್ಯತೆಯಾಗಿದೆ ಮತ್ತು ಅವುಗಳ ಹೊರತಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 78 ಭರವಸೆಗಳನ್ನು ನೀಡಿದೆ, ಅವೆಲ್ಲವನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಕಾಯಶೀಲವಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ