ಕಾವೇರಿ ನದಿ ಮತ್ತು ಜಲಾಶಯಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಮೈಸೂರು, ಮಂಡ್ಯ, ಕೋಲಾರ ಮತ್ತು ಬೆಂಗಳೂರು ನಗರ ಪ್ರದೇಶಗಳ ಜನ ಕುಡಿಯುವ ನೀರಿಗಾಗಿ ಕಾವೇರಿ ನದಿ ನೀರನ್ನೇ ಅವಲಂಬಿಸಿದ್ದಾರೆಂದು ಗೊತ್ತಿದ್ದಾಗ್ಯೂ ಸಿದ್ದರಾಮಯ್ಯ ತಮಿಳುನಾಡುಗೆ ನೀರು ಬಿಟ್ಟಿದ್ದಾರೆ. ಆ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ, ಕುಡಿಯುವ ನೀರಿಗಾಗಿ ಅಲ್ಲಿ ಹಾಹಾಕಾರವೆದ್ದಿದ್ದರೆ ನೀರು ಬಿಡುವುದು ತಪ್ಪಲ್ಲ, ನಾವು ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆವು, ತಮಿಳುನಾಡು ಪಾಕಿಸ್ತಾನವೇನೂ ಅಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬೆಂಗಳೂರು: ಬಿಜೆಪಿ ರಾಜ್ಯ ಬಿಜೆಪಿ ಘಟಕ ಆರಂಭಿಸಿರುವ ಮತದಾರ ಚೇತನ ಮಹಾ ಚೇತನ ಅಭಿಯಾನದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje), ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಮಿಳುನಾಡುಗೆ ಕಾವೇರಿ ನದಿ ನೀರು ಹರಿಸಿ ರೈತರ ಅಕ್ರೋಶಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ವಿನಾಕಾರಣ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರನ್ನು (PM Narendra Modi) ಎಳೆತಂದು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು. ತಮಿಳುನಾಡುಗೆ ಎಷ್ಟು ನೀರು ಹರಿಸಲಾಗಿದೆ, ಕಾವೇರಿ ನದಿ ಮತ್ತು ಅದರ ಜಲಾನಯನ ಪ್ರದೇಶಗಳಲ್ಲಿ ಜಲಾಶಯಗಳಲ್ಲಿ ಎಷ್ಟೆಷ್ಟು ನೀರಿದೆ ಅಂತ ಒಂದು ಶ್ವೇತಪತ್ರ ಹೊರಡಿಸಬೇಕು ಎಂದ ಅವರು ಮೈಸೂರು, ಮಂಡ್ಯ, ಕೋಲಾರ ಮತ್ತು ಬೆಂಗಳೂರು ನಗರ ಪ್ರದೇಶಗಳ ಜನ ಕುಡಿಯುವ ನೀರಿಗಾಗಿ ಕಾವೇರಿ ನದಿ ನೀರನ್ನೇ ಅವಲಂಬಿಸಿದ್ದಾರೆಂದು ಗೊತ್ತಿದ್ದಾಗ್ಯೂ ಸಿದ್ದರಾಮಯ್ಯ ತಮಿಳುನಾಡುಗೆ ನೀರು ಬಿಟ್ಟಿದ್ದಾರೆ. ಆ ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ನೀರಿದೆ, ಕುಡಿಯುವ ನೀರಿಗಾಗಿ ಅಲ್ಲಿ ಹಾಹಾಕಾರವೆದ್ದಿದ್ದರೆ ನೀರು ಬಿಡುವುದು ತಪ್ಪಲ್ಲ, ನಾವು ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆವು, ತಮಿಳುನಾಡು ಪಾಕಿಸ್ತಾನವೇನೂ ಅಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ